ಹುಬ್ಬಳ್ಳಿ: ಸದನದಲ್ಲಿ ಸಚಿವ ಸುಧಾಕರ್ ನೀಡಿದ್ದ ಏಕಪತ್ನಿ ವ್ರತಸ್ಥ ಹೇಳಿಕೆ ಖಂಡಿಸಿ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಏಕಪತ್ನಿ ವ್ರತಸ್ಥ ಹೇಳಿಕೆ: ಸುಧಾಕರ್ ವಿರುದ್ಧ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಪ್ರತಿಭಟನೆ
ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಎಲ್ಲಾ ಶಾಸಕರು ಚಾರಿತ್ರ್ಯಹೀನರು ಎಂಬ ಅರ್ಥದಲ್ಲಿ ಹೇಳಿರುವುದು ಅವರ ಘನತೆಗೆ ಧಕ್ಕೆ ತರುವಂತಾಗಿದೆ. ಸದನದಲ್ಲಿ ಮಹಿಳಾ ಶಾಸಕರು ಇದ್ದಾರೆ. ಅವರ ಚಾರಿತ್ರ್ಯಕ್ಕೂ ಕಳಂಕ ತರುವ ಹೇಳಿಕೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಪ್ರತಿಭಟನೆ
ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಎಲ್ಲಾ ಶಾಸಕರು ಚಾರಿತ್ರ್ಯಹೀನರು ಎಂಬ ಅರ್ಥದಲ್ಲಿ ಹೇಳಿರುವುದು ಅವರ ಘನತೆಗೆ ಧಕ್ಕೆ ತರುವಂತಾಗಿದೆ. ಸದನದಲ್ಲಿ ಮಹಿಳಾ ಶಾಸಕರು ಇದ್ದಾರೆ ಅವರ ಚಾರಿತ್ರ್ಯಕ್ಕೂ ಕಳಂಕ ತರುವ ಹೇಳಿಕೆಯಾಗಿದ್ದು, ತಕ್ಷಣವೇ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಚಾರಿತ್ರ್ಯದ ಚಾಲೆಂಜ್ಗೆ ಹಲವರಿಂದ ಆಕ್ಷೇಪ; ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಸಚಿವ ಸುಧಾಕರ್