ಹುಬ್ಬಳ್ಳಿ:ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಲಘಟಗಿಯ ಕಲಕುಂಡಿ ಗ್ರಾಮದ ಹೋಳಿಗಣಿ ಸರ್ಕಲ್ ಬಳಿ ನಡೆದಿದೆ.
ಕಲಘಟಗಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನ ಕೊಲೆ - Kalaghatgi murder case
ಕ್ಷುಲ್ಲಕ ಕಾರಣಕ್ಕೆ ಗಂಗಾಧರ ನೂಲ್ವಿ ಎಂಬಾತ ಹೋಳಿಗಣಿ ಕ್ರಾಸ್ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಜಗದೀಶ್ನನ್ನು ತಡೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಜಗದೀಶ್ ತಾಂಬರೆ: ಕೊಲೆಯಾದ ಯುವಕ
ಜಗದೀಶ್ ತಾಂಬರೆ (25) ಕೊಲೆಯಾದ ಯುವಕ. ಮೃತ ಜಗದೀಶ್ ಹಾಗೂ ಅವರ ಮನೆಯ ಪಕ್ಕದ ಶಾರದಾ ಪಾಟೀಲ್ ಎಂಬುವವರ ನಡುವೆ ಕಸ ಹಾಕುವ ವಿಚಾರಕ್ಕೆ ಪದೇ ಪದೆ ಜಗಳವಾಗುತ್ತಿತ್ತು. ಇದೇ ವೈಮನಸ್ಸು ಇಟ್ಟುಕೊಂಡ ಶಾರದಾ ಪಾಟೀಲ್ ಪ್ರಚೋದನೆ ಮೇಲೆ ಗಂಗಾಧರ ನೂಲ್ವಿ ಎಂಬಾತ, ಹೋಳಿಗಣಿ ಕ್ರಾಸ್ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಜಗದೀಶ್ನನ್ನು ತಡೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Sep 7, 2020, 11:57 AM IST