ಕಲಘಟಗಿ:ಆಶಾ ಕಾರ್ಯಕರ್ತೆಯರ ತಿಂಗಳ ಗೌರವ ಧನವನ್ನು 12 ಸಾವಿರಕ್ಕೆ ಹೆಚ್ಚಿಸಿಬೇಕು ಹಾಗೂ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಸುರಕ್ಷಾ ಸಾಮಗ್ರಿಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿ ತಾಲೂಕು ವೈದ್ಯಾಧಿಕಾರಿ ಡಾ.ಬಸವರಾಜ ಬಾಸೂರ ಅವರಿಗೆ ಮನವಿ ಸಲ್ಲಿಸಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ಕಲಘಟಗಿ ಆಶಾ ಕಾರ್ಯಕರ್ತೆಯರ ಆಗ್ರಹ - Asha workers demands latest news
ಕೋವಿಡ್ -19 ನಿವಾರಣೆಗೆ ಸೇವೆ ಸಲ್ಲಿಸಲು ಅಗತ್ಯವಿರುವ ಸುರಕ್ಷಾ ಸಾಮಗ್ರಿ ನೀಡಬೇಕು. ಕೊರೊನಾ ಸೋಂಕಿತ ಆಶಾ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ, ಪರಿಹಾರ ನೀಡಬೇಕು. ವೇತನ ಹೆಚ್ಚಳ ಮಾಡಿ ತಿಂಗಳಿಗೆ 12 ಸಾವಿರ ಗೌರವ ಧನ ನೀಡಬೇಕು ಎಂದು ತಾಲೂಕಿನ ಆಶಾ ಕಾರ್ಯಕರ್ತೆಯರು ಆಗ್ರಹಿಸಿದರು.
ತಾಲೂಕಿನ ಆಶಾ ಕಾರ್ಯಕರ್ತೆಯರು ಇಂದು ತಮ್ಮ ಒಂದು ದಿನದ ಸೇವೆ ಸ್ಥಗಿತಗೊಳಿಸಿ, ಕೋವಿಡ್ -19 ನಿವಾರಣೆಗೆ ಸೇವೆ ಸಲ್ಲಿಸಲು ಅಗತ್ಯವಿರುವ ಸುರಕ್ಷಾ ಸಾಮಗ್ರಿ ನೀಡಬೇಕು. ಕೊರೊನಾ ಸೋಂಕಿತ ಆಶಾ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ, ಪರಿಹಾರ ನೀಡಬೇಕು. ವೇತನ ಹೆಚ್ಚಳ ಮಾಡಿ ತಿಂಗಳಿಗೆ 12 ಸಾವಿರ ಗೌರವ ಧನ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಆಶಾ ಕಾರ್ಯಕರ್ತೆಯರಾದ ಶಾರದಾ ತಾವರಗೇರಿ, ಶೋಭಾ ಯಾದವ, ಸುಶೀಲಾ ಮುಗಳಿ, ಶೋಭಾ ಹಿರೇಮಠ, ಲೀಲಾವತಿ ಹೆಬ್ಬಾಳ, ಸುಭದ್ರಾ ಟೆಕ್ಕಳಕ್ಕಿ, ರೇಖಾ ದೇಸಾಯಿ, ಬಸಮ್ಮ ಹೆಬ್ಬಳ್ಳಿ, ಪ್ರೇಮಾ ಲಮಾಣಿ, ಗೀತಾ ಕಂಬಾರ, ಮಂಜುಳಾ ಮೊರಬ ಇದ್ದರು.