ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮೀಷನರೇಟ್ನ ಕಾನೂನು ಮತ್ತು ಸುವ್ಯವಸ್ಥೆ ನೂತನ ಡಿಸಿಪಿಯಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ರಾಮರಾಜನ್ ಅವರನ್ನು ಓಓಡಿ (ಅನ್ಯ ಕರ್ತವ್ಯದ ಆಧಾರದ ಮೇಲೆ) ಕರ್ತವ್ಯದ ಆಧಾರದ ಮೇಲೆ ನಿಯೋಜಿಸಲಾಗಿದೆ.
ಲಾ & ಆರ್ಡರ್ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಕೆ.ರಾಮರಾಜನ್ - Hubli-Dharwad Police Commissioner
ಚನ್ನಪಟ್ಟಣದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ರಾಮರಾಜನ್ ಅವರನ್ನು ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮೀಷನರೇಟ್ನ ಕಾನೂನು ಸುವ್ಯವಸ್ಥೆ ನೂತನ ಡಿಸಿಪಿಯಾಗಿ ನಿಯೋಜಿಸಲಾಗಿದೆ..
![ಲಾ & ಆರ್ಡರ್ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಕೆ.ರಾಮರಾಜನ್ K. Ramarajan, IPS officer as Law & Order DCP](https://etvbharatimages.akamaized.net/etvbharat/prod-images/768-512-9582014-129-9582014-1605698681478.jpg)
ಡಿಸಿಪಿ ಕೆ.ರಾಮರಾಜನ್
ಹು-ಧಾ ಪೊಲೀಸ್ ಕಮಿಷನರೇಟ್ನಲ್ಲಿ ಡಿಸಿಪಿ ಕಾನೂನು ಸುವ್ಯವಸ್ಥೆ ಹುದ್ದೆ ಖಾಲಿ ಇದ್ದು, ಅದನ್ನು ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಅವರು ಪ್ರಭಾರಿ ಆದೇಶದ ಮೇರೆಗೆ ನಿರ್ವಹಣೆ ಮಾಡುತ್ತಿದ್ದರು.
ಈಗ ಓಓಡಿ ಆದೇಶದ ಮೇರೆಗೆ ಕೆ.ರಾಮರಾಜನ್ ಅವರನ್ನು ನಿಯೋಜಿಸಲಾಗಿದ್ದು, ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಕೃಷ್ಣಕಾಂತ ಅವರಿಗೆ ಹೊರೆ ಕಡಿಮೆಯಾದಂತಾಗಿದೆ.