ಕರ್ನಾಟಕ

karnataka

ETV Bharat / state

ಜೋಶಿನಾ-ವಿನಯ್​ ಕುಲಕರ್ಣಿನಾ?... ಕೈ ಕಾರ್ಯಕರ್ತರಿಂದ ಹೀಗೊಂದು ಕ್ಯಾಂಪೇನ್​! - ಆಕಳು ಪೂಜೆ

ಸಾಮಾಜಿಕ ಜಾಲತಾಣದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ, ಕ್ಷೇತ್ರದ ಮತದಾರರಿಗೆ ಯೋಚಿಸಿ ಮತ ನೀಡುವಂತೆ ಕೈ ಕಾರ್ಯಕರ್ತರು ಮನವಿ.

ಸಂಸದ ಪ್ರಹ್ಲಾದ್ ಜೋಶಿ ಮತ್ತು ವಿನಯ್​ ಕುಲಕರ್ಣಿ

By

Published : Mar 16, 2019, 8:10 PM IST

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ. ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಗೆ ಇನ್ನು ಟಿಕೆಟ್ ಘೋಷಣೆ ಆಗದಿದ್ದರೂ ಕೂಡ ಕೈ ಕಾರ್ಯಕರ್ತರು ಫೆಸ್​​ಬುಕ್​​ನಲ್ಲಿ ಕ್ಯಾಂಪೇನ್ ನಡೆಸುತ್ತಿದ್ದಾರೆ.

ಮಾಜಿ ಸಚಿವ ವಿನಯ್ ಕುಲಕರ್ಣಿ ಗೆಲ್ಲಿಸಿ, ಜೋಶಿ‌ ಸೋಲಿಸಿ, ಪ್ಲ್ಯಾಸ್ಟಿಕ್ ಆಕಳು ಪೂಜೆ ಮಾಡೋ ನಕಲಿ ಗೋರಕ್ಷಕರು ಬೇಕಾ? 2000ಕ್ಕೂ‌ ಹೆಚ್ಚು ಗೋವುಗಳನ್ನು ಮಕ್ಕಳಂತೆ ಸಾಕೋ ನಿಜವಾದ ಗೋಪಾಲಕ ಬೇಕಾ ಎಂದು ಧಾರವಾಡ ಹಾಲಿ ಸಂಸದರ ವಿರುದ್ಧ ಕೈ ಕಾರ್ಯಕರ್ತರು ವ್ಯಂಗ್ಯವಾಡಿ ಕ್ಷೇತ್ರದ ಜನರಿಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಕ್ಷೇತ್ರದ ಮತದಾರರಿಗೆ ಯೋಚಿಸಿ ಮತ ನೀಡುವಂತೆ ಕೈ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಕಾಂಗ್ರೆಸ್ ಕಾರ್ಯಕರ್ತರ ಫೇಸ್​ಬುಕ್ ಪೋಲಿಂಗ್ ಕಂಡು ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್ ಕಾರ್ಯಕರ್ತರು ನಡೆಸಿರುವ ಫೇಸ್​ಬುಕ್ ಪೋಲಿಂಗ್​ನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಿಮ್ಮ ಆಯ್ಕೆ ಅಂತಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ‌ ಉತ್ತರವಾಗಿ ಎಲ್ಲಾ ಪೋಲಿಂಗ್​​​ನಲ್ಲಿ ಸಂಸದ ಪ್ರಹ್ಲಾದ್ ಜೋಶಿಗೆ ಮುನ್ನಡೆ ದೊರೆತಿದೆ. ಇದರಿಂದ ಫುಲ್ ಖುಷ್ ಆಗಿರೋ ಕಮಲ ಪಡೆ ಕಾಂಗ್ರೆಸ್ ಮುಕ್ತ 8 ಜಿಲ್ಲೆ, ಜೆಡಿಎಸ್ ಮುಕ್ತ 20 ಜಿಲ್ಲೆ, ಕರ್ನಾಟಕದಾದ್ಯಂತ ಅರಳುತ್ತಿದೆ ಬಿಜೆಪಿ. ಜೈ ನಮೋ ಅಂತಾ ಫೇಸ್​​ಬುಕ್​​ನಲ್ಲಿಯೇ ತಿರುಗೇಟು ನೀಡುತ್ತಿದ್ದಾರೆ.‌

ಇನ್ನು ವಿನಯ್ ಕುಲಕರ್ಣಿಗೆ ಟಿಕೆಟ್ ಪಕ್ಕಾ ಆಗದೇ ಇರೋದು ಒಂದೆಡೆಯಾದರೆ, ಪೋಲಿಂಗ್​ನಲ್ಲಿ ವಿನಯ್ ಕುಲಕರ್ಣಿಗೆ ಹಿನ್ನಡೆಯಾಗಿರೋದ್ರಿಂದ ಫೇಸ್​ಬುಕ್​ ಪಾಲಿಟಿಕ್ಸ್​​ನಲ್ಲಿ ಕೈ ಕಾರ್ಯಕರ್ತರು ಮುಜುಗರಕ್ಕೊಳಗಾಗುವಂತೆ ಮಾಡಿದೆ.‌

ABOUT THE AUTHOR

...view details