ಕರ್ನಾಟಕ

karnataka

ETV Bharat / state

ಉತ್ತರ ಕರ್ನಾಟಕದಲ್ಲಿ ಜೋಕುಮಾರ ಸ್ವಾಮಿ ಆಚರಣೆ ವಿಶೇಷ ಮತ್ತು ಹಿನ್ನೆಲೆ ಏನು? - ಜೋಕುಮಾರ ಸ್ವಾಮಿ

ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ವಿಭಿನ್ನ ಹೆಸರುಗಳಿಂದ ಆಚರಿಸಲ್ಪಡುವ ಜೋಕುಮಾರ ಸ್ವಾಮಿಯ ಆಚರಣೆ ಕರ್ನಾಟಕದಲ್ಲಿ ಮನೆ ಮಾತಾಗಿದೆ.

Jokumaraswamy celebration
ಜೋಕುಮಾರ ಸ್ವಾಮಿ ಆಚರಣೆ

By

Published : Sep 3, 2020, 11:01 AM IST

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಇಂದಿಗೂ ಕೂಡ ಹಲವಾರು ಆಚರಣೆಗಳು ಜೀವಂತವಾಗಿವೆ.‌ ಅದರಲ್ಲಿ ಜೋಕುಮಾರ ಸ್ವಾಮಿಯ ಆಚರಣೆ ಕೂಡ ಒಂದು.

ಉತ್ತರ ಕರ್ನಾಟಕದಲ್ಲಿ ಜೋಕುಮಾರ ಸ್ವಾಮಿ ಆಚರಣೆ ಇಂದಿಗೂ ಜೀವಂತ..

ಹೌದು, ಗಣೇಶ ಚತುರ್ಥಿ ಮುಗಿದ 5 ದಿನಕ್ಕೆ ಮತ್ತೊಬ್ಬ ದೇವರು ಜನ್ಮ ತಾಳುತ್ತಾನೆ. ಆ ದೇವರೇ ಜೋಕುಮಾರ ಸ್ವಾಮಿ. ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ವಿಭಿನ್ನ ಹೆಸರುಗಳಿಂದ ಆಚರಿಸಲ್ಪಡುವ ಜೋಕುಮಾರ ಸ್ವಾಮಿಯ ಆಚರಣೆ ಕರ್ನಾಟಕದಲ್ಲಿ ಮನೆ ಮಾತಾಗಿದೆ. ನಾಲ್ಕೈದು ಜನ ಮಹಿಳೆಯರು ಬುಟ್ಟಿ ಹೊತ್ತುಕೊಂಡು ಪ್ರತಿಯೊಂದು ಮನೆಗೂ ಅಳಲು-ಅಂಬಲಿ ನೀಡುವ ಮೂಲಕ ಹಾಡು ಹೇಳಿ ಜೋಕುಮಾರನ ವರ್ಣನೆ ಮಾಡುತ್ತಾರೆ.

ಅಡ್ಡಡ್ಡ ಮಳೆ ಬಂದು.. ದೊಡ್ಡ ದೊಡ್ಡ ಕೆರೆ ತುಂಬಿ ಗೊಡ್ಡುಗಳೆಲ್ಲ ಹೈನಾಗಿ.., ಗೊಡ್ಡುಗಳೆಲ್ಲ ಹೈನಾಗಿ ಗೌಡರ ಷಡ್ಡಿಯ ಮೇಲೆ ಸಿರಿ ಬರಲಿ.., ಅಂದ್ರೆ ಸಂಪದ್ಭರಿತ ಮಳೆಯಾಗಿ ಎಮ್ಮೆ ಆಕಳುಗಳೆಲ್ಲ ಹಾಲು ಕರೆದು ಮನೆಯಲ್ಲಿ ಹಾಲಿನ ಹೊಳೆ ಹರಿಯಲಿ. ಗೌಡರು ಬಿತ್ತಿರುವ ಬೆಳೆಯು ಸಿರಿ ಸಂಪತ್ತಾಗಿ ಮನೆಗೆ ಬರಲಿ ಎಂಬುದು ಜೋಕುಮಾರ ಸ್ವಾಮಿಯನ್ನು ಹೊತ್ತು ತರುವ ಮಹಿಳೆಯರ ಹಾರೈಕೆ.

ಜೋಕುಮಾರ ಸ್ವಾಮಿ ಆಚರಣೆ

5 ದಿನ ಗಣೇಶ ಭಕ್ತರಿಂದ ವಿಶೇಷ ಪೂಜೆಯನ್ನು ಪಡೆಯಲು ಭೂಮಿಗೆ ಬರುತ್ತಾನೆ.‌ ಅದರಂತೆ ಜೋಕುಮಾರ ಸ್ವಾಮಿ ಕೂಡ 7 ದಿನಗಳ ಕಾಲ ಹಳ್ಳಿ ಹಳ್ಳಿಗೆ ಸಂಚರಿಸಿ ರೈತರ ಕಷ್ಟಗಳನ್ನು ಆಲಿಸಿ ಅವರಿಗೆ ಸೂಕ್ತ ಆಶೀರ್ವಾದ ಮಾಡುತ್ತಾನೆ ಎಂಬುದು ಪೂರ್ವಜರ ನಂಬಿಕೆ ಹಾಗೂ ಪ್ರತೀತಿ.

ಮೂಲಾ ನಕ್ಷತ್ರದಲ್ಲಿ ಜನಿಸುವ ಜೋಕುಮಾರ 7 ದಿನ ಸಕಿಯರೊಂದಿಗೆ ಲೋಕಸಂಚಾರದಲ್ಲಿ ತೊಡಗಿ ಜನರ ಕಷ್ಟಗಳನ್ನು ಆಲಿಸುತ್ತಾನೆ ಎಂದು ಜೋಕುಮಾರನ ಹೊತ್ತು ತಂದಿರುವ ಮಹಿಳೆಯರು ಹಾನಪದ ಹಾಡಿನ ಮೂಲಕ ಜೋಕುಮಾರನನ್ನು ಗುಣಗಾನ‌ ಮಾಡುತ್ತಾರೆ. ‌ಇವರು ಕೊಡುವ ಅಳಲು ಅಂಬಲಿಯನ್ನು ಹೊಲಕ್ಕೆ ಹಾಕಿದರೇ ಬೆಳೆ ಚನ್ನಾಗಿ ಬರುತ್ತದೆ ಎಂಬುದು ಜನರ ನಂಬಿಕೆ.

ಬಳಿಕ ಜನರು ದವಸ ಧಾನ್ಯಗಳನ್ನು ಹಾಗೂ ಉಡುಗೊರೆಯನ್ನು ನೀಡುತ್ತಾರೆ.‌ ಅಲ್ಲದೇ ವರ್ಷವಿಡೀ ಮಳೆಯಾಗದಿದ್ದರೇ ಜೋಕುಮಾರನಲ್ಲಿ ಪ್ರಾರ್ಥನೆ ಮಾಡುತ್ತಾರೆ. ಅಲ್ಲದೇ ಜೋಕುಮಾರನ ನಿಮ್ಮಜ್ಜನ ಗಣೇಶನಷ್ಟು ಅದ್ದೂರಿಯಲ್ಲ. ಜೋಕುಮಾರನ ಹೊತ್ತಿರುವ ಮಹಿಳೆಯರು ಮಾತ್ರ ಗುಪ್ತವಾಗಿ ಹೋಗಿ ನಿಮಜ್ಜನ ಮಾಡುತ್ತಾರೆ. ಆಧುನಿಕತೆಯ ಭರಾಟೆಯಲ್ಲಿ ಇಂತಹ ಆಚರಣೆಗಳು ‌ಕ್ಷೀಣಿಸುತ್ತಿವೆ.‌ ಆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಇಂದಿಗೂ ಆಚರಣೆಗಳು ಜೀವಂತವಾಗಿರುವುದು ವಿಶೇಷವಾಗಿದೆ.

ABOUT THE AUTHOR

...view details