ಕರ್ನಾಟಕ

karnataka

ETV Bharat / state

ತನ್ನ ಕಾರಿಗೆ ಬೇರೆ ನಂಬರ್​ ಬಳಕೆ: ಪಾಲಿಕೆ ಮಾಜಿ ಸದಸ್ಯನ ಕಾರು ಸೀಜ್​ - JDS Leader use duplicate Number plate in his car

ವಾರ್ಡ್ ನಂಬರ್ 2 ನಿಂದ ಈ ಹಿಂದೆ ಜೆಡಿಎಸ್ ಕಾರ್ಪೋರೇಟರ್ ಆಗಿದ್ದ ಶ್ರೀಕಾಂತ್ ಜಮನಾಳ ಎಂಬುವವರು ಕಳೆದ ಎರಡು ವರ್ಷದಿಂದ ಬೇರೆ ನಂಬರ್​ ಒಳಗೊಂಡ ಟಾಟಾ ಸಫಾರಿ ಕಾರಿನಲ್ಲಿ ಓಡಾಡುತ್ತಿದ್ದರು.

ಪಾಲಿಕೆ ಮಾಜಿ ಸದಸ್ಯನ ಕಾರು ವಶ JDS Leader use duplicate Number plate in his car,
ಪಾಲಿಕೆ ಮಾಜಿ ಸದಸ್ಯನ ಕಾರು ವಶ

By

Published : Feb 6, 2020, 1:37 PM IST

ಧಾರವಾಡ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ತನ್ನ ಕಾರಿಗೆ ಬೇರೆಯವರ ವಾಹನದ ನಂಬರ್ ಹಾಕಿಕೊಂಡು ಓಡಾಡಿ, ಇದೀಗ ಸಿಕ್ಕಿಬಿದ್ದಿದ್ದಾರೆ.

ವಾರ್ಡ್ ನಂಬರ್ 2 ಜೆಡಿಎಸ್ ಪಕ್ಷದಿಂದ ಕಾರ್ಪೋರೇಟರ್ ಆಗಿದ್ದ ಶ್ರೀಕಾಂತ್ ಜಮನಾಳ ಎಂಬುವರು ಕಳೆದ ಎರಡು ವರ್ಷದಿಂದ ಬೇರೆ ನಂಬರ್​ ಒಳಗೊಂಡ ಟಾಟಾ ಸಫಾರಿ ಕಾರಿನಲ್ಲಿ ಓಡಾಡುತ್ತಿದ್ದರು.

ಇವರು ಬಳಸುತ್ತಿದ್ದ ಕಾರಿನ ನಂಬರ್​ ಹುಂಡೈ ವೆರ್ನಾ ಕಾರಿನ ನಂಬರ್ ಆಗಿದ್ದು, ಇನ್ನು ಈ ಟಾಟಾ ಸಫಾರಿ ಕಾರಿನ ಹಿಂಭಾಗ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾವಚಿತ್ರದ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದರು. ಇದೆಲ್ಲವನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ‌ ನೀಡಿದ ಹಿನ್ನೆಲೆ ಇಂದು ವಾಹನವನ್ನು ಧಾರವಾಡ ಸಂಚಾರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details