ಕರ್ನಾಟಕ

karnataka

ETV Bharat / state

'ಪಾಟೀಲ್ರು ಮುಂದೆ ಸಿಎಂ ಆದ್ರೆ ಕಷ್ಟ ಅಂತ ತಿಳಿದು ಹೀಗೆ ಮಾಡುತ್ತಿದ್ದಾರೆ' - JDS leader

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿ ಫೇಸ್​ಬುಕ್​​ನಲ್ಲಿ ಹಂಚಿಕೊಂಡಿದ್ದ ಶೃತಿ ಬೆಳ್ಳಕ್ಕಿ ಬಗ್ಗೆ ಜೆಡಿಎಸ್ ಮುಖಂಡರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಶೃತಿ ಬಂಧನ ಬಗ್ಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮತ್ತು ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ್ ಪ್ರತಿಕ್ರಿಯೆ

By

Published : Apr 29, 2019, 9:57 AM IST

ಧಾರವಾಡ: ಶೃತಿ ಬೆಳ್ಳಕ್ಕಿ ಓರ್ವ ಬಿಜೆಪಿ ಮತ್ತು ಆರ್​ಎಸ್​ಎಸ್​ ಕಾರ್ಯಕರ್ತೆ. ನಮ್ಮದೇ ಜಾತಿಯವರ ಕಡೆಯಿಂದ ಈ ರೀತಿಯ ಹೇಳಿಕೆ ಕೊಡಿಸಿ ಜಗಳ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಒಡೆದು ಆಳುವ ನೀತಿಯನ್ನು ಆರ್​ಎಸ್​ಎಸ್​ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮತ್ತು ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ್ ಹುಣಸಿಮರದ​ ದೂರಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್​ಎಸ್​ಎಸ್ ಮುಖಂಡರು ಶೃತಿ ಬೆಳ್ಳಕ್ಕಿಗೆ ಕಲಿಸಿಕೊಟ್ಟಿದ್ದಾರೆ. ಅದಕ್ಕೆ ಅವರು ಹೀಗೆಲ್ಲ ಮಾಡುತ್ತಿದ್ದಾರೆ. ಶೃತಿ ಬೆಳ್ಳಕ್ಕಿ ಓರ್ವ ಬಿಜೆಪಿ ಕಾರ್ಯಕರ್ತೆ. ಆದರೆ, ವಿನಾ ಕಾರಣ ಕಾನೂನು ವಿದ್ಯಾರ್ಥಿ ಎಂದು ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶೃತಿ ಬೆಳ್ಳಕ್ಕಿ ವಿರುದ್ಧ ಧಶರಥ ದೇಸಾಯಿ ಎನ್ನುವವರು ದೂರು ನೀಡಿದ್ದಾರೆ. ಗೃಹ ಸಚಿವರು ಮತ್ತು ಮಾಜಿ ಸಚಿವರು ಸೇರಿ ಬಂಧನ ಮಾಡಿಸಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಅರವಿಂದ ಬೆಲ್ಲದ್ ಮತ್ತು ಸಂಸದ ಪ್ರಹ್ಲಾದ್​ ಜೋಶಿ ಸೇರಿಕೊಂಡು ಧಶರಥ ದೇಸಾಯಿ ಅವರು ನೀಡಿದ ದೂರನ್ನು ತಿರುಚಿದ್ದಾರೆ ಎಂದು ದೂರಿದರು.

ಶೃತಿ ಬಂಧನ ಬಗ್ಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮತ್ತು ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ್ ಪ್ರತಿಕ್ರಿಯೆ

ಬಿಜೆಪಿ ಮತ್ತು ಆರ್​ಎಸ್​ಎಸ್​​ದಿಂದ ನಮ್ಮ ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ನಡೆದಿದೆ. ಅನೇಕ ತಪ್ಪು ಕಲ್ಪನೆಗಳನ್ನು ಇಂದಿನ ಯುವ ಜನರಿಗೆ ನೀಡುತ್ತಿದ್ದಾರೆ. ಜೋಶಿಯವರು ಇಷ್ಟು ದಿನ ಹಿಂದು-ಮುಸ್ಲಿಂನವರ ನಡುವೆ ಜಗಳ ಹಚ್ಚಿದ್ದಾರೆ. ಲಿಂಗಾಯತರ ನಡುವೆ ಹೊಡೆದಾಡಿಸುವ ಉದ್ದೇಶದಿಂದ ಹೀಗೆಲ್ಲ ನಡಿಯುತ್ತಿದೆ ಎಂದು ಆರೋಪಿಸಿದರು.

ಮಲ್ಲಪ್ಪ ಶೆಟ್ಟಿಯಂತೆ ಜೋಶಿ ಜೊತೆಗೆ ಬೆಲ್ಲದ ಕೈ ಜೋಡಿಸಿದ್ದಾರೆ. ಇಷ್ಟೆಲ್ಲ ಆಗಲು ಜೋಶಿ ಮತ್ತು ಅವರ ಹಿಂಬಾಲಕರೇ ಕಾರಣ. ಲಿಂಗಾಯತರ ಏಳಿಗೆ ಸಹಿಸದೇ ಹೀಗೆಲ್ಲ ಮಾಡುತ್ತಿದ್ದಾರೆ. ಮುಂದೊಂದು ದಿನ ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಆದ್ರೆ ಇವರಿಗೆಲ್ಲ ಕಷ್ಟ ಅಂತ ತಿಳಿದು ಹೀಗೆಲ್ಲ ಮಾಡುತ್ತಿದ್ದಾರೆ. ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ABOUT THE AUTHOR

...view details