ಧಾರವಾಡ:ನಡು ರಸ್ತೆಯಲ್ಲಿ ಮಹಿಳೆ ಕೈ ಹಿಡಿದು ಎಳೆದಾಡಿದ ಪ್ರಕರಣ ಸಂಬಂಧ ಜೆಡಿಎಸ್ ಮುಖಂಡ ಶ್ರೀಕಾಂತ್ ಜಮುನಾಳ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪರಿಚಯಸ್ಥ ಮಹಿಳೆಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಧಾರವಾಡ ಹೊರವಲಯದ ಸತ್ತೂರು ಬಳಿ ಮಹಿಳೆಯ ಕೈಹಿಡಿದು ಎಳೆದಾಡಿದ ವಿಡಿಯೋ ವೈರಲ್ ಆಗಿತ್ತು. ಶ್ರೀಕಾಂತ್ ಜಮನಾಳ, ಜೆಡಿಎಸ್ ಮುಖಂಡ ಮತ್ತು ಮಾಜಿ ಕಾರ್ಪೋರೇಟರ್ ಸಹ ಆಗಿದ್ದಾರೆ.
ಸ್ಥಳದಲ್ಲಿದ್ದ ಮತ್ತೋರ್ವ ಮಹಿಳೆ ಎಳೆದಾಡಿದ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ಘಟನೆ ಬಳಿಕ ವಿದ್ಯಾಗಿರಿ ಠಾಣೆಗೆ ನೊಂದ ಮಹಿಳೆ ದೂರು ದಾಖಲಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಜಮನಾಳ ತಲೆಮರೆಸಿಕೊಂಡಿದ್ದರು. ಸವದತ್ತಿ ತಾಲೂಕಿನ ಹಳ್ಳಿಯೊಂದರಲ್ಲಿ ಜಮನಾಳ ಪತ್ತೆಯಾಗಿದ್ದು, ವಿದ್ಯಾಗಿರಿ ಪೊಲೀಸರು ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ.
ಇದನ್ನೂ ಓದಿ:ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡನ ವಿರುದ್ಧ ಮಹಿಳೆಯಿಂದ ಪೊಲೀಸರಿಗೆ ದೂರು