ಹುಬ್ಬಳ್ಳಿ:ಸಿದ್ರಾಮಣ್ಣನಂತಹ ನಾಯಕರಿಗೆ ಬಳೆ ತೊಟ್ಟಕೊಳ್ಳಬೇಕು ಎಂಬ ಶೋಭಾ ಕರಂದ್ಲಾಜೆಯವರ ಹೇಳಿಕೆಗೆ ಸಚಿವೆ ಜಯಮಾಲಾ ತಿರುಗೇಟು ನೀಡಿದ್ದು ಶೋಭಾ ಕರದ್ಲಾಂಜೆ ಅವರದ್ದು ಎಲುಬಿಲ್ಲದ ನಾಲಿಗೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶೋಭಾ ಕರದ್ಲಾಂಜೆ ಅವರದ್ದು ಎಲುಬಿಲ್ಲದ ನಾಲಿಗೆ: ಜಯಮಾಲಾ - undefined
ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ಕುರಿತು ನೀಡಿರುವ ಹೇಳಿಕೆಗೆ ಸಚಿವೆ ಜಯಮಾಲಾ ತಿರುಗೇಟು ನೀಡಿದ್ದು, ಲಘುವಾದ ಮಾತು ಯಾರಿಗೂ ಶೋಭೆ ತರುವುದಿಲ್ಲ. ಹೀಗಾಗಿ ಶೋಭಾ ಕರಂದ್ಲಾಜೆಯವರು ತಮ್ಮ ಮಾತನ್ನು ಹಿಂಪಡೆಯಬೇಕು ಎಂದಿದ್ದಾರೆ.

ಜಯಮಾಲಾ
ಜಯಮಾಲಾ
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ರಾಮಣ್ಣ ಬಳೆ ತೊಟ್ಟುಕೊಳ್ಳುವಂತ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ 5 ವರ್ಷ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಯಾವ ಸಿಎಂ ಮಾಡದ ರೀತಿಯಲ್ಲಿ ಜನಪರ ಕೆಲಸ ಮಾಡಿದ್ದಾರೆ ಎಂದರು.
ಲಘುವಾದ ಮಾತು ಯಾರಿಗೂ ಶೋಭೆ ತರುವುದಿಲ್ಲ. ಹೀಗಾಗಿ ಶೋಭಾ ಕರಂದ್ಲಾಜೆಯವರು ತಮ್ಮ ಮಾತನ್ನು ಹಿಂಪಡೆಯಬೇಕು ಎಂದು ತಿಳಿಸಿದರು.