ಹುಬ್ಬಳ್ಳಿ: ನಾಗರ ಪಂಚಮಿ ಎಂದ್ರೆ ಹುತ್ತಕ್ಕೆ ಹಾಲೆರೆಯುವುದೇ ಆಚರಣೆ ಎಂದುಕೊಂಡಿರುವ ಮೌಢ್ಯತೆಗೆ ಇಲ್ಲಿನ ಸ್ವಾಮೀಜಿಗಳು 10 ವರ್ಷದ ಹಿಂದಿನಿಂದಲೂ ಸೆಡ್ಡು ಹೊಡೆದುಕೊಂಡು ಬರುತ್ತಿದ್ದಾರೆ.
ಅಂಧ ಮಕ್ಕಳ ಜೊತೆ ನಾಗರ ಪಂಚಮಿ ಆಚರಣೆ; ಮೌಢ್ಯತೆಗೆ ಸೆಡ್ಡು - Naga panchami
ಸಿದ್ದಾರೂಢ ನಗರದಲ್ಲಿರುವ ಆರೂಢ ಅಂಧ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿಶಿಷ್ಟವಾಗಿ ನಾಗರ ಪಂಚಮಿ ಹಬ್ಬ ಆಚರಣೆ ಮಾಡಿದರು.
ಅಂಧ ಮಕ್ಕಳ ಜೊತೆ ನಾಗರ ಪಂಚಮಿಯಂದು ಆಚರ
ಹುತ್ತಕ್ಕೆ ಹಾಲು ಹಾಕದೆ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗಿದೆ. ಸಿದ್ದಾರೂಢ ನಗರದಲ್ಲಿರುವ ಆರೂಢ ಅಂಧ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿಶಿಷ್ಟವಾಗಿ ನಾಗರ ಪಂಚಮಿ ಹಬ್ಬ ಆಚರಿಸಿದ್ರು.
ಕಳೆದ ಹಲವು ವರ್ಷಗಳಿಂದ ಹುತ್ತಕ್ಕೆ ಹಾಲು ಹಾಕುವ ಬದಲಿಗೆ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಭಕ್ತಿಯ ಹೆಸರಿನಲ್ಲಿ ಕಲ್ಲು ನಾಗಪ್ಪ ಹಾಗೂ ಹುತ್ತಕ್ಕೆ ಹಾಲು ಎರೆದು ಹಾಳು ಮಾಡುವ ಬದಲು ಮಕ್ಕಳಿಗೆ ಹಾಲುಣಿಸಿ ಎಂದು ಸ್ವಾಮೀಜಿ ಕರೆ ನೀಡಿದರು.