ಹುಬ್ಬಳ್ಳಿ: ಉತ್ತರ ಕರ್ನಾಟಕದ ಬೆಳಗಾವಿಯ ಗಡಿ ಭಾಗದ ಸಮಸ್ಯೆಯ ಜೊತೆಗೆ ಪ್ರೇಮ ಕಥೆಯೊಂದನ್ನು ಹೇಳುಲು 'ಗಡಿನಾಡು' ಸಿನಿಮಾ ಜ.24 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ವಸಂತಮುರಾರಿ ದಳವಾಯಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗ್ ಹುಣಸೋಡ್ ಅವರು ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು, ನಾಯಕ ನಟನಾಗಿ ಪ್ರಭು ಸೂರ್ಯ, ನಟಿಯಾಗಿ ಸಂಚಿತಾ ಪಡಕೋಣೆ ಅಭಿನಯ ಮಾಡಿದ್ದಾರೆ. ನಾಯಕ ವಿದ್ಯಾಭ್ಯಾಸ ಮುಗಿಸಿ ಹುಟ್ಟೂರಾದ ಬೆಳಗಾವಿಗೆ ಬರುವಾಗ ಆ ಭಾಗದ ಗಡಿ ಸಮಸ್ಯೆಯಿಂದ ಪ್ರೇರಣೆಗೊಂಡು, ಗಡಿಯ ಶಾಶ್ವತ ಪರಿಹಾರವನ್ನು ಹೇಗೆ ಕಂಡುಕೊಳ್ಳುವವನು. ಅಲ್ಲದೇ ಮರಾಠಿ ಹುಡುಗಿಯನ್ನು ಪ್ರೀತಿಸಿ, ಪ್ರೀತಿಯನ್ನು ಪಡೆಯಲು ಏನೆಲ್ಲಾ ಮಾಡುವನು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ ಎಂದರು.