ಧಾರವಾಡ:ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಕರೆ ವಿಚಾರವನ್ನು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಸ್ವಾಗತಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾವನ್ನು ಚೀನಾದವರು ಮೊದಲು ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಗಂಭೀರತೆ ಗೊತ್ತಾದಾಗ ಎಲ್ಲ ಸಂಪರ್ಕ ಬಂದ್ ಮಾಡಿದರು. ಕೊರೊನಾಗೆ ಸದ್ಯ ಮದ್ದೇ ಇಲ್ಲ ಕೊರನಾ ಬಗ್ಗೆ ನಮ್ಮ ದೇಶದಲ್ಲಿ ಮಾಡುತ್ತಿರುವ ಕ್ರಮಗಳು ಒಳ್ಳೆಯದಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಸ್ವಾಗತ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಆರ್. ಹಿರೇಮಠ ಅಲ್ಲದೇ ಜನರು ಎಷ್ಟು ಮುಂಜಾಗ್ರತೆ ತೆಗೆದುಕೊಳ್ಳುತ್ತೆವೆಯೋ ಅಷ್ಟು ಒಳ್ಳೆಯದು. ಮೋದಿ ಒಳ್ಳೆಯದು ಹೇಳಿದ್ದಾರೆ ನಾವು ಅದನ್ನು ಒಪ್ಪಿಕೊಳ್ಳಬೇಕು. ಸರ್ಕಾರ ಮತ್ತು ನಾಗರಿಕರು ಕೂಡಿ ಈ ಮಹಾಮಾರಿಯನ್ನು ಹೋಗಿಸಬೇಕು ಎಂದು ಕರೆ ನೀಡಿದ್ದಾರೆ.
ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕೀಳು ಮಟ್ಟದ ಪ್ರವೃತ್ತಿಯ ಪ್ರಕರಣ ಅದಾಗಿತ್ತು. ಇವತ್ತು ಅದು ತಾತ್ವಿಕ ಅಂತ್ಯ ಕಂಡಿದೆ. ಇವರ ಕ್ರೂರತೆ ಮುಂದೆ ಬೆಳೆಯಬಾರದು ಎಂದರು.
ರಂಜನ್ ಗೊಗೊಯ್ ರಾಜ್ಯಸಭೆಗೆ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗೊಗೊಯ್ ನಮ್ಮ ದೇಶದೊಳಗಿದ್ದ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ. ನವೆಂಬರ್‌ನಲ್ಲಿ ನಿವೃತ್ತರಾಗಿದ್ದಾರೆ. ಕೆಲವೇ ತಿಂಗಳಲ್ಲಿ ರಾಜ್ಯಸಭಾ ಸದಸ್ಯರಾಗಿದ್ದಾರೆ ಎಂದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.