ETV Bharat Karnataka

ಕರ್ನಾಟಕ

karnataka

ETV Bharat / state

ಮೂರುಸಾವಿರ ಮಠದ ಆಸ್ತಿ ಉಳಿಸಲು ಜನಾಂದೋಲನ: ನಾಗರಾಜ್ ಛಬ್ಬಿ - Mooru savira math hubli news

ಮೂರುಸಾವಿರ ಮಠದ ಆಸ್ತಿ ಉಳಿಸಲು ಹೋರಾಟ ಅನಿವಾರ್ಯವಾಗಿದೆ. ಮಠದ ಆಸ್ತಿಯು ಕೇವಲ ಪಟ್ಟಭದ್ರ ಶಕ್ತಿಗಳ ಕಪಿಮುಷ್ಠಿಯಲ್ಲಿದೆ. ಅವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಮಾಜಿ ಶಾಸಕ ನಾಗರಾಜ ಛಬ್ಬಿ ಎಚ್ಚರಿಸಿದ್ದಾರೆ.

Nagaraj Chhabbi
ಮಾಜಿ ಶಾಸಕ ನಾಗರಾಜ ಛಬ್ಬಿ ಮಾಜಿ ಶಾಸಕ ನಾಗರಾಜ ಛಬ್ಬಿ
author img

By

Published : Mar 24, 2021, 8:07 PM IST

ಹುಬ್ಬಳ್ಳಿ:ಮೂರು ಸಾವಿರ ಮಠದ ಆಸ್ತಿ ಪರಭಾರೆ ಹಾಗೂ ಆಸ್ತಿ ಉಳಿಸುವ ಕುರಿತಂತೆ ಶೀಘ್ರ ಮಠದ ಗುರುಸಿದ್ದರಾಜಯೋಗೀಂದ್ರ ಶ್ರೀಗಳನ್ನು ಭೇಟಿ ಮಾಡಿ, ನಿರ್ಧಾರ ತಗೆದುಕೊಳ್ಳಲಾಗುವುದು ಎಂದು ಮಾಜಿ ಶಾಸಕ ನಾಗರಾಜ ಛಬ್ಬಿ ಹೇಳಿದರು.

ನಗರದಲ್ಲಿಂದು ಮೂರುಸಾವಿರ ಮಠ ಉಳಿಸಿ ಪಕ್ಷಾತೀತ ಹೋರಾಟ ಸಮಿತಿಯಿಂದ ಪೂರ್ವಭಾವಿ ಸಭೆ ನಡೆಸಲಾಯಿತು. ಬಳಿಕ ಮಾತನಾಡಿದ ಅವರು, ಮಠದ ಆಸ್ತಿ ಉಳಿಸಲು ಹೋರಾಟ ಅನಿವಾರ್ಯವಾಗಿದೆ. ಈ ಆಸ್ತಿಯು ಕೇವಲ ಪಟ್ಟಭದ್ರ ಶಕ್ತಿಗಳ ಕಪಿಮುಷ್ಠಿಯಲ್ಲಿದ್ದು ಅವರ ವಿರುದ್ಧ ನಮ್ಮ ಹೋರಾಟ ನಿರಂತರ ನಡೆಯಲಿದೆ ಎಂದರು.

ಮಾಜಿ ಶಾಸಕ ನಾಗರಾಜ ಛಬ್ಬಿ

ಮೂರುಸಾವಿರ ಮಠದ ಆಸ್ತಿಯನ್ನು ಕೆಎಲ್​ಇ ಸಂಸ್ಥೆಗೆ ಪರಭಾರೆ ಮಾಡಿರುವುದನ್ನು ವಾಪಸ್​ ಪಡೆಯುವವರಿಗೆ ಜನಾಂದೋಲನ ಹೋರಾಟ ನಡೆಸುವ ಕುರಿತು, ಶೀಘ್ರವೇ ಗುರುಸಿದ್ದರಾಜಯೋಂಗಿಂದ್ರ ಶ್ರೀಗಳನ್ನು ಭೇಟಿ ಮಾಡಿ ನಿರ್ಧಾರ ಮಾಡಲಾಗುವುದು. ಮಠದ ವಿವಾದ ಇವತ್ತು ನಿನ್ನೆಯದಲ್ಲ. ಆಸ್ತಿ ಪರಭಾರೆ ವಿಚಾರದಲ್ಲಿ ಏನು ವ್ಯವಹಾರ ನಡೆದಿದೆ. ಮೂರು ಸಾವಿರ ಮಠದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭಕ್ತರಿಗೆ ಉತ್ತರಿಸಿ ಎಂದು ಸ್ವಾಮೀಜಿಗಳಿಗೆ ಮನವಿ ಮಾಡಿದ್ರೂ, ಉತ್ತರ ಕೊಡ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯ ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿಲ್ಲ : ರೋಮಿ ಬಾಟಿ ಅಸಮಾಧಾನ

ಮೂಜಗು ಶ್ರೀಗಳು ಮತ್ತು ಮಠದ ಉನ್ನತ ಸಮಿತಿಯ ಸದಸ್ಯರು ಯಾರೂ ಮಾತನಾಡುತ್ತಿಲ್ಲ. ಈ ಸಮಿತಿಗೆ ಈಗಿರುವ ಸದಸ್ಯರು ರಾಜೀನಾಮೆ ನೀಡಬೇಕು. ಉನ್ನತ ಸಮಿತಿ ಸದಸ್ಯರಿಗೆ ಮಠದ ಆಸ್ತಿ ಉಳಿಸುವ ಆಸಕ್ತಿ ಇಲ್ಲ. ಉನ್ನತ ಸಮಿತಿಯವರು ಮತ್ತು ಮೂಜಗು ಶ್ರೀಗಳು ಆಸ್ತಿ ಪರಭಾರೆ ವಿಚಾರವನ್ನು ಭಕ್ತರಿಗೆ ತಿಳಿಸಬೇಕು. ಶ್ರೀಗಳು ಮೌನವಾಗಿರುವುದರಿಂದ ಹಲವು ಸಂಶಯಗಳಿಗೆ ಕಾರಣವಾಗಿದೆ. ಈಗ ಕೊಟ್ಟಿರುವ ಆಸ್ತಿಗಳನ್ನು ಮರಳಿ ಪಡೆಯಬೇಕು. ಮುಂದಿನ‌ ದಿನಗಳಲ್ಲಿ ಯಾವುದೇ ಆಸ್ತಿ ಪರಭಾರೆ ಮಾಡಬಾರದು ಎಂದರು.

ABOUT THE AUTHOR

...view details