ಧಾರವಾಡ: ದೇಶ, ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಶೇ. 35ಕ್ಕೆ ಹೋಗಿತ್ತು, ಅದೀಗ ಶೇ.14 ಕ್ಕೆ ಬಂದಿದೆ. ರಾಜ್ಯದಲ್ಲಿಯೂ ಇವತ್ತು ಶೇ.14 ಕ್ಕೆ ಬರಬಹುದು. ಪ್ರತೀ ಹಂತದಲ್ಲೂ ಕೊರೊನಾ ಇಳಿಕೆಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಜಗದೀಶ ಶೆಟ್ಟರ್ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ನಿಂದ ಇದೆಲ್ಲ ಸಾಧ್ಯವಾಗಿದೆ. ಇನ್ನೂ ಏಳು ದಿನ ಲಾಕ್‌ಡೌನ್ ಇದೆ. ಜೂ. 5 ಅಥವಾ 6 ರಂದು ಬರುವ ಪಾಸಿಟಿವಿಟಿ ರೇಟ್ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಿಎಂ ಈ ಬಗ್ಗೆ ಮಾಡುತ್ತಾರೆ. ಮುಂದಿನ ನಿರ್ಧಾರ ಅವರೇ ತೆಗೆದುಕೊಳ್ಳುತ್ತಾರೆ. ಶೇ. 5 ರಷ್ಟು ಪಾಸಿಟಿವಿಟಿ ಬಂದರೆ ಲಾಕ್‌ಡೌನ್ ಸಡಿಲಿಕೆ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಸಿಎಂ ಬಿಎಸ್ವೈ ಬಗ್ಗೆ ಯತ್ನಾಳ ವಾಗ್ದಾಳಿ ಬಗ್ಗೆ ಮಾತನಾಡಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆ ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ ಎಂದರು. ಸಿಎಂ ಬದಲಾವಣೆ ಗೊಂದಲ ವಿಚಾರಕ್ಕೆ ಮಾತನಾಡಿದ ಅವರು, ಅದು ನನಗೆ ಅರ್ಥವೇ ಆಗುತ್ತಿಲ್ಲ. ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಇದೀಗ ಇದ್ದವರೇ ಮುಂದುವರಿಯುತ್ತಾರೆ. ಸಹಿ ಸಂಗ್ರಹದ ವಿಚಾರವೂ ನನಗೆ ಗೊತ್ತಿಲ್ಲ ಈ ಬೆಳವಣಿಗೆ ಬಗ್ಗೆ ಎಲ್ಲಿ ಏನು ಮಾತಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಉತ್ತರಿಸಿದರು.