ಹುಬ್ಬಳ್ಳಿ:ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಸಂಘಪರಿವಾರದ ಹೆಸರು ತೆಗೆದುಕೊಳ್ಳದೇ ಇದ್ದರೆ ತಿಂದಿದ್ದು ಅರಗುವುದಿಲ್ಲ. ರಾಜ್ಯದಲ್ಲಿನ ಎಲ್ಲ ಸಮಸ್ಯೆಗಳಿಗೂ ಸಂಘವನ್ನೇ ಗುರಿ ಮಾಡುತ್ತಾರೆ. ಪದೇ ಪದೆ ಆರ್‌ಎಸ್‌ಎಸ್ ಹೆಸರು ಹೇಳೋದು ಖಯಾಲಿಯಾಗಿ ಬಿಟ್ಟಿದೆ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಸರ್ಕಾರದ ಬಗ್ಗೆಯಾಗಲಿ ಅಥವಾ ಮುಖ್ಯಮಂತ್ರಿಗಳ ಬಗ್ಗೆಯಾಗಲಿ ಏನಾದ್ರೂ ಮಾತಾಡೋದಿದ್ರೆ ಮಾತನಾಡಲಿ. ಅದನ್ನು ಬಿಟ್ಟು ಸಂಘಪರಿವಾರದ ವಿರುದ್ಧ ಅನಗತ್ಯ ಟೀಕೆ ಮಾಡೋದು ಸರಿಯಲ್ಲ. ಪ್ರತಿಪಕ್ಷದ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಇವತ್ತು ಸಂಘದ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಶೆಟ್ಟರ್ ಹೇಳಿದರು.