ಹುಬ್ಬಳ್ಳಿ:ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಬೆಂಬಲಿಗರ ಅಭಿಪ್ರಾಯ ಸಂಗ್ರಹ ಸಭೆ ಆರಂಭವಾಗಿದೆ. ಹುಬ್ಬಳ್ಳಿ ಮಧುರಾ ಎಸ್ಟೇಟ್ ನಿವಾಸದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ನಿಮ್ಮೆಲ್ಲರ ಪ್ರೀತಿಗೆ ಅಭಿನಂದನೆ. ಕಳೆದ ಆರು ಭಾರಿ ನನ್ನ ಗೆಲುವಿಗೆ ನಿಮ್ಮೆಲ್ಲರ ಆಶೀರ್ವಾದ ಮರೆಯಲು ಸಾಧ್ಯವಿಲ್ಲ. ಹುಬ್ಬಳ್ಳಿ ಧಾರವಾಡ ಜನತೆಯಿಂದ ರಾಜ್ಯಮಟ್ಟದ ನಾಯಕನಾಗಿ ಗುರುತಿಸಿಕೊಂಡಿದ್ದೇನೆ. ರಾಜ್ಯದ ಹಿತ, ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿದ್ದೇನೆ. ವಿಪಕ್ಷ ನಾಯಕ ಇದ್ದಾಗ ಇಡೀ ಕರ್ನಾಟಕದಲ್ಲಿ ಯಡಿಯೂರಪ್ಪ, ಅನಂತ ಕುಮಾರ ಅವರ ನಾಯಕತ್ವದಲ್ಲಿ ನಾನು ನನ್ನದೇ ಆದ ಸೇವೆ ಮಾಡಿದ್ದೇನೆ ಎಂದರು.
ದೊಡ್ಡ ಪಾರ್ಟಿ ಆಗಿ ಬಿಜೆಪಿ ಬೆಳೆದಿದೆ. ಕೆಳಹಂತದದಿಂದ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಇಂದು ಪಕ್ಷ ಶಕ್ತಿಯುತವಾಗಿ ಬೆಳೆದಿದೆ. ಬಿಜೆಪಿ ನನಗೆ ಎಲ್ಲ ಸ್ಥಾನ ಕೊಟ್ಟಿದೆ. ಅದಕ್ಕೆ ಚಿರಋಣಿ ಆಗಿದ್ದೇನೆ. ಮೊದಲು ಮತ್ತು ಎರಡನೇ ಲಿಸ್ಟ್ ನಲ್ಲಿ ಶೆಟ್ಟರ್ ಹೆಸರು ಬರಲಿಲ್ಲ ಅಂತಾ ಕರೆ ಬರ್ತಿವೆ. ರಾಜ್ಯದ ನಾಯಕರಾಗಿದ್ದರೂ ಟಿಕೆಟ್ ಕೊಡ್ತಿಲ್ಲ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ದೆಹಲಿಗೆ ಬನ್ನಿ ಅಂತಾ ಹೇಳಿದ್ರು. ಅದರಂತೆ ಮಾತನಾಡಿ ಬಂದೆ. ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಅವಕಾಶ ತಾನಾಗಿಯೇ ಬಂದಿವೆ. ಮತ್ತೊಮ್ಮೆ ಅವಕಾಶ ಕೊಡವಂತೆ ಹೇಳಿದ್ದೇನೆ. ಬೆಂಬಲಿಗರ ನಿರ್ಧಾರ ಎಲ್ಲವನ್ನೂ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದರು.
ಇದನ್ನೂ ಓದಿ:ನಾಳೆ ಟಿಕೆಟ್ ಘೋಷಣೆ ಆಗದೇ ಹೋದ್ರೆ, ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ: ಶೆಟ್ಟರ್ ಎಚ್ಚರಿಕೆ
ಯಾರನ್ನೂ ಟೀಕೆ ಮಾಡಲ್ಲ: ಏಳು ಭಾರಿ ಸ್ಪರ್ಧೆ ಮಾಡಲು ಎಲ್ಲೆಲ್ಲಿ ಹೋಗಿದ್ದೇನೆ ಅಲ್ಲಿ ಜನರು ನೀವು ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೀರಿ ಎಂದು ಹೇಳುತ್ತಿದ್ದರು. ಹಾಗಾಗಿ ಅತ್ಯಂತ ಲೀಡ್ ನಲ್ಲಿ ಗೆಲ್ಲಿಸುತ್ತೇನೆ ಅಂತಾ ಭರವಸೆ ನೀಡಿದ್ದಾರೆ. ನೀವು ಆಶೀರ್ವಾದ ಮಾಡದೇ ಇದ್ದರೆ ನಾನು ಜಿರೋ ಆಗಿರುತ್ತಿದ್ದೆ. ನನ್ನ ಹೀರೋ ಮಾಡಿದ್ದು ನೀವು. ಜನತೆ ಸೇವೆ ಸಲುವಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಯಾರನ್ನೂ ಟೀಕೆ ಮಾಡಲ್ಲ. ಮೋದಿ ಇಡೀ ದೇಶದ ಚಿತ್ರಣವನ್ನು ಬದಲಿಸಿದರು. ಅಮಿತ್ ಶಾ ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಕೆಲವು ಪ್ರಮುಖರು ಭೇಟಿಯಾಗಿದ್ದಾರೆ. ನೀವು ನಿಮ್ಮ ಅಭಿಪ್ರಾಯ ಹೇಳಿ ನನಗೆ ನೈತಿಕತೆ ಬೆಂಬಲ ಕೊಟ್ಟಿದ್ದೀರಿ. ಅದನ್ನ ಮರೆಯುವುದಿಲ್ಲ. ಈಗ ಕೇಂದ್ರ ಸಚಿವ ಜೋಶಿ, ಶಂಕರ ಪಾಟೀಲ ಮುನೇನಕೊಪ್ಪ ಬಂದಿದ್ದರು. ನಡ್ಡಾ ಮಾತನಾಡಿದ್ದಾರೆ ಎಂದರು.