ಹುಬ್ಬಳ್ಳಿ:ಕೇಂದ್ರ ಸಚಿವಪ್ರಹ್ಲಾದ್ ಜೋಶಿಯವರಿಗೆ 60 ವರ್ಷ ವಯಸ್ಸಾಗಿದೆ. ಅರಿವು ಮರುವು ಆಗಿದೆ. ಅಧಿಕಾರದ ಮದ ಹೆಚ್ಚಾಗಿ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹರಿಹಾಯ್ದರು.
ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೋಶಿಯವರಿಗೆ ಮುಂದಿನ 2024 ಚುನಾವಣೆಯಲ್ಲಿ ಗೊತ್ತಾಗುತ್ತದೆ. ಸೆಂಟ್ರಲ್ ಕ್ಷೇತ್ರ ಚುನಾವಣೆ ಇಡೀ ದೇಶದಲ್ಲಿಯೇ ಸೆಂಟರ್ ಸ್ಟೇಜ್ಗೆ ಬಂದಿದೆ. ನಮ್ಮ ಕ್ಷೇತ್ರವನ್ನು ಈ ಸ್ಟೇಜ್ಗೆ ತಂದವರು ಬಿಜೆಪಿಯವರು. ಎಲ್ಲ ಸರ್ವೇಯಲ್ಲಿ ಬಿಜೆಪಿ ಸಕ್ಸಸ್ ಕಂಡಿದೆ. ಆದರೆ ಬಿಜೆಪಿ ಮುಖಂಡರು ಡಿಸ್ಟರ್ಬ್ ಮಾಡಿ ತಳಪಾಯ ಹಾಳು ಮಾಡಿದ್ದಾರೆ. ಸೆಂಟ್ರಲ್ ಡಿಸ್ಟರ್ಬ್ ಮಾಡಿದ್ರೆ ಉತ್ತರ ಕರ್ನಾಟಕದ ಭಾಗದಲ್ಲಿ ಡಿಸ್ಟರ್ಬ್ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೆಟ್ಟರ್ ಕಡೆಗಣಿಸಿದ್ದಕ್ಕೆ ಬಿಜೆಪಿ ಹಣೆಬರಹ ಈಗ ಗೊತ್ತಾಗುತ್ತಿದೆ. ನನ್ನನ್ನು ಸೋಲಿಸಲು ಬಿಜೆಪಿ ಅಜೆಂಡಾ ಮಾಡಿದೆ. ನಾನು ಏನು ಅನ್ಯಾಯ ಮಾಡಿದ್ದೇನೆ? ನನ್ನಿಂದ ಬಿಜೆಪಿಗೆ ಏನು ಅನ್ಯಾಯ ಆಗಿದೆ...? ನನಗೆ ಅಧಿಕಾರದ ಆಸೆ ಇಲ್ಲ. ಶಾಸಕನಾಗಬೇಕು ಅಂದುಕೊಂಡಿದ್ದೆ. 22 ವರ್ಷ ಶಾಸಕನಾಗಿದ್ದೇನೆ. ಜನರ ಜೊತೆಗೆ ಇರುವುದು ನನ್ನ ಮಹದಾಸೆ. ಹಿಂದಿನ ಬಾಗಿಲು ರಾಜಕಾರಣ ನನಗೆ ಹಿಡಿಸುವುದಿಲ್ಲ ಎಂದು ಶೆಟ್ಟರ್ ಹೇಳಿದ್ರು.
ಜನರು ಜತೆ ಇದ್ದು ಕೆಲಸ ಮಾಡೋದು ಕಂಫರ್ಟೆಬಲ್: ಜನರ ಹೊರಗಡೆ ಇದ್ದು ಎಂದೂ ಕೆಲಸ ಮಾಡಿ ತೃಪ್ತಿ ಇಲ್ಲ. ಜನರು ಜತೆ ಇದ್ದು ಕೆಲಸ ಮಾಡೋದು ಕಂಫರ್ಟೆಬಲ್, ರಾಜಕೀಯ ಯಾವಾಗಲೂ ಸ್ಥಾನಮಾನ ಅಧಿಕಾರಿ ರಾಜ್ಯಪಾಲ, ರಾಜ್ಯಸಭೆ ಮೆಂಬರ್ ಆಗುವುದು ನನಗೆ ಇಷ್ಟ ಇಲ್ಲ. ಜನರ ಮಧ್ಯದಲ್ಲಿ ಇದನ್ನು ಹೇಳಿದಾಗ ಜನರೇ ಅರ್ಥ ಮಾಡಿಕೊಂಡಿದ್ದಾರೆ. ಶೆಟ್ಟರ್ಗೆ ಅನ್ಯಾಯವಾಗಿರುವ ಬಗ್ಗೆ ಜನರಿಗೆ ಮನವರಿಕೆಯಾಗಿದೆ. ನಾನು ಈ ಕ್ಷೇತ್ರವನ್ನು ರೆಡಿ ಮಾಡಿದ್ದೇನೆ ಎಂದರು.