ಕರ್ನಾಟಕ

karnataka

ETV Bharat / state

ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಪ್ರಚಾರ ವಾಹನಕ್ಕೆ ಜಗದೀಶ್ ಶೆಟ್ಟರ್ ಚಾಲನೆ - Crop Survey Mobile App

ಸಚಿವ ಜಗದೀಶ್ ಶೆಟ್ಟರ್ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆ ಮತ್ತು ಸಮೀಕ್ಷೆ ವಿವರಗಳನ್ನು ದಾಖಲಿಸುವ ಕುರಿತು ಮಾಹಿತಿಯುಳ್ಳ ಕರಪತ್ರ, ಪೋಸ್ಟರ್ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು.

Crop Survey Mobile App
Crop Survey Mobile App

By

Published : Aug 14, 2020, 10:11 AM IST

ಧಾರವಾಡ: 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆಗಸ್ಟ್ 11ರಿಂದ ಆರಂಭವಾಗಿದ್ದು, ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ಸ್ವಯಂ ದಾಖಲಿಸಲು ಸರ್ಕಾರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆ ಮತ್ತು ಸಮೀಕ್ಷೆ ವಿವರಗಳನ್ನು ದಾಖಲಿಸುವ ಕುರಿತು ಮಾಹಿತಿಯುಳ್ಳ ಕರಪತ್ರ, ಪೋಸ್ಟರ್ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ನಂತರ ಅವರು ಬೆಳೆ ಸಮೀಕ್ಷೆ ಮೂಬೈಲ್ ಆ್ಯಪ್ ಕುರಿತು ಗ್ರಾಮೀಣ ಭಾಗದಲ್ಲಿ ಸಂಚರಿಸಿ, ಮಾಹಿತಿ ನೀಡುವ ಪ್ರಚಾರ ವಾಹನಗಳಿಗೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಪಂ ಸಿಇಒ ಡಾ. ಬಿ.ಸಿ.ಸತೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್ ಐ.ಬಿ. ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details