ಧಾರವಾಡ:ನಗರದ ಡಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ನೂತನ ಕೋವಿಡ್ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇಂದು ಚಾಲನೆ ನೀಡಿದರು.
ಕೋವಿಡ್ ಪ್ರಯೋಗಾಲಯಕ್ಕೆ ಶೆಟ್ಟರ್ ಚಾಲನೆ - Jagadish Shettar news
ಹೆಚ್ಚಾಗುತ್ತಿರುವ ಕೊರೊನಾ ವೈರಸ್ನಿಂದ ಪಾರಾಗಲು ಧಾರವಾಡದಲ್ಲಿ ಇನ್ನಿಲ್ಲದ ಪ್ರಯತ್ನಗಳು ನಡೆದಿವೆ. ಇಂದು ದಿನಕ್ಕೆ 100 ಕೊರೊನಾ ಶಂಕಿತರ ಪರೀಕ್ಷೆ ಮಾಡಬಹುದಾದ ನೂತನ ಕೋವಿಡ್ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ಕೋವಿಡ್ ಪ್ರಯೋಗಾಲಯಕ್ಕೆ ಶೆಟ್ಟರ್ ಚಾಲನೆ
ಧಾರವಾಡದ ಡಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಕೋವಿಡ್ ಪ್ರಯೋಗಾಲಯನ್ನು ಸ್ಥಾಪನೆ ಮಾಡಲಾಗಿದೆ. ಇಂದು ಸಚಿವ ಜಗದೀಶ್ ಶೆಟ್ಟರ್ ಅದಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಪ್ರಯೋಗಾಲಯದಲ್ಲಿ ಶಂಕಿತರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ದಿನಕ್ಕೆ 100 ಶಂಕಿತರ ಪರೀಕ್ಷೆ ಮಾಡಬಹುದಾಗಿದೆ. ಇದು ಜಿಲ್ಲೆಯಲ್ಲಿ ಎರಡನೇ ಪ್ರಯೋಗಾಲಯವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.