ಹುಬ್ಬಳ್ಳಿ: ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಶ್ರದ್ಧಾಂಜಲಿ ಸಲ್ಲಿಸಿ ಕಂಬನಿ ಮಿಡಿದರು. ನಗರದ ಜನತಾ ಮಾರುಕಟ್ಟೆಯ ವ್ಯಾಪಾರಸ್ಥರು ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸ್ವಾಮೀಜಿಗಳ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು.
ಸಿದ್ಧೇಶ್ವರ ಶೀ ಲಿಂಗೈಕ್ಯ.. ಕಂಬನಿ ಮಿಡಿದ ಬೀದಿ ಬದಿ ವ್ಯಾಪಾರಿಗಳು, ಜಗದೀಶ್ ಶೆಟ್ಟರ್ ಸಂತಾಪ - siddeshwara swamiji
ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯ- ಹುಬ್ಬಳ್ಳಿಯ ಜನತಾ ಮಾರುಕಟ್ಟೆಯ ವ್ಯಾಪಾರಸ್ಥರಿಂದ ಸ್ವಾಮೀಜಿ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ- ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂತಾಪ.
ಶೆಟ್ಟರ್ ಸಂತಾಪ:ಸಿದ್ಧೇಶ್ವರ ಸ್ವಾಮೀಜಿಗಳು ಅಪಾರ ಭಕ್ತ ಸಮೂಹ ಹೊಂದಿದ್ದರು. ತಮ್ಮ ಪ್ರವಚನಗಳ ಮೂಲಕವೇ ಜೀವನದ ಪಾಠ ಹೇಳುತ್ತಿದ್ದರು. ಇಡೀ ರಾಜ್ಯ ಹಾಗೂ ದೇಶಕ್ಕೆ ಅವರು ಮಾದರಿಯಾದವರು. ಅವರ ಪ್ರವಚನ ಕೇಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದರು. ಸ್ವಾಮೀಜಿಗಳಾಗಿದ್ದರೂ ಅವರು ಸರಳ ಜೀವಿಯಾಗಿದ್ದರು. ಸ್ವಾಮೀಜಿಗಳು ತಮ್ಮ ಜೀವನದುದ್ದಕ್ಕೂ ಆಶ್ರಮದ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅಪೇಕ್ಷೆ ಪಡೆಯಲಿಲ್ಲ. ಅವರ ಅಗಲಿಕೆಯಿಂದ ಇಡೀ ಭಕ್ತ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶ್ರದ್ಧಾಂಜಲಿ ಅರ್ಪಿಸಿದರು.
ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತ ಸಾಗರ - ವಿಡಿಯೋ