ಕರ್ನಾಟಕ

karnataka

ETV Bharat / state

ಕುಂಬಳಕಾಯಿ ಕಳ್ಳ ‌ಅಂದ್ರೆ ಕಾಂಗ್ರೆಸ್​​​ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದೆ: ಶೆಟ್ಟರ್​​​ - kannada newspaper

ಐಟಿ ಸಂಸ್ಥೆ ಒಂದು ಸ್ವತಂತ್ರ ಸಂಸ್ಥೆ.‌ ಐಟಿ ಅಧಿಕಾರಿಗಳು ಗುತ್ತಿಗೆದಾರರು ಹಾಗೂ ಎಂಜಿನಿಯರ್ಸ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಕುಂಬಳಕಾಯಿ ಕಳ್ಳ ‌ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುವಂತೆ ಕಾಂಗ್ರೆಸ್​ನವರು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಜಗದೀಶ್ ಶೆಟ್ಟರ್

By

Published : Mar 30, 2019, 3:30 PM IST

ಹುಬ್ಬಳ್ಳಿ:ಐಟಿ ಸಂಸ್ಥೆ ಒಂದು ಸ್ವತಂತ್ರ ಸಂಸ್ಥೆ.‌ ಆದರೆ ತಮ್ಮ ಕಪ್ಪುಹಣ ರಕ್ಷಣೆ ಮಾಡಿಕೊಳ್ಳಲು ರಾಷ್ಟ್ರಪತಿಗಳಿಗೆ ದಿನೇಶ್​ ಗುಂಡುರಾವ್ ಪತ್ರ ಬರೆದಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಕುಂಬಳಕಾಯಿ ಕಳ್ಳ ‌ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುವಂತೆ ಕಾಂಗ್ರೆಸ್​ನವರು ಮಾಡುತ್ತಿದ್ದಾರೆ. ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಜರೂರತ್ ಏನಿದೆ. ಯಾವ ಆಧಾರದ ಮೇಲೆ ಪತ್ರ ಬರೆಯುತ್ತೀರಿ ಎಂದು‌ ಪ್ರಶ್ನಿಸಿದರು.

ಕುಂಬಳಕಾಯಿ ಕಳ್ಳ ‌ಅಂದ್ರೆ ಕಾಂಗ್ರೆಸ್​ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದೆ

ಐಟಿ ಅಧಿಕಾರಿಗಳು ಗುತ್ತಿಗೆದಾರರು ಹಾಗೂ ಎಂಜಿನಿಯರ್ಸ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಯಾವುದೇ ಶಾಸಕ, ಸಚಿವರ ಮನೆ ಮೇಲೆ ದಾಳಿ‌ ಮಾಡಿಲ್ಲ. ಇವರ ಮೇಲೆ ದಾಳಿ ಮಾಡಿದ್ದಕ್ಕೆ ನೀವು ಪ್ರತಿಭಟನೆ ಮಾಡಿದ್ರೆ ನಿಮ್ಮ ‌ಕಪ್ಪು ಹಣ ಅವರ ಮನೆಯಲ್ಲಿ‌ ಇದೆ ಅಂತ ಅರ್ಥವಾಗುತ್ತೆ. ಅವರನ್ನು ಯಾಕೆ ರಕ್ಷಣೆ ಮಾಡಲಿಕ್ಕೆ ಹೊರಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಮೂಲಕ ಪ್ರಚಾರ ತೆಗೆದುಕೊಳ್ಳುವ ತಂತ್ರ ಮಾಡುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ABOUT THE AUTHOR

...view details