ಹುಬ್ಬಳ್ಳಿ : ಜಗದೀಶ್ ಶೆಟ್ಟರ್ (ಜಗದೀಶ್ ಶಿವಪ್ಪ ಶೆಟ್ಟರ್) ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮತ್ತೊಮ್ಮೆ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜಗದೀಶ್ ಶೆಟ್ಟರ್ ಭಾರತೀಯ ಜನತಾ ಪಕ್ಷದ ಪ್ರಭಾವಿ ರಾಜಕಾರಣಿ ಹಾಗೂ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ ಪ್ರಬಲ ನಾಯಕ. ಕರ್ನಾಟಕ ಸರ್ಕಾರದಲ್ಲಿ ವಿತ್ತ, ಗಣಿ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. ಎಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದಾಗ ಕಂದಾಯ ಇಲಾಖೆಯ ಜವಾಬ್ದಾರಿವಹಿಸಿದ್ದ ಜಗದೀಶ್ ಶೆಟ್ಟರ್, 2008-09ರಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಾಗೂ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ 19 ಜುಲೈ 2012 ರಿಂದ 8 ಮೇ 2013ರವರೆಗೆ ಅಧಿಕಾರ ನಡೆಸಿದ್ದಾರೆ.
ವೈಯಕ್ತಿಕ ಮಾಹಿತಿ:
ಜನನ: ( 17-12-1955)
ಕೆರೂರು, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ
ತಂದೆ :ಶಿವಪ್ಪ, ತಾಯಿ :ಬಸವಣೆಮ್ಮ. ಪತ್ನಿ : ಶಿಲ್ಪಾ. ಪುತ್ರರು:ಪ್ರಶಾಂತ ಹಾಗೂ ಸಂಕಲ್ಪ.
ವಿದ್ಯಾರ್ಹತೆ:ಬಿ.ಕಾಂ. ಎಲ್.ಎಲ್.ಬಿ
ಶೆಟ್ಟರ್ ಅವರ ರಾಜಕೀಯ ಜೀವನ:
ಸದಸ್ಯರು: ಎಬಿವಿಪಿ, ಆರ್.ಎಸ್.ಎಸ್
1990 : ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲೂಕು ಘಟಕದ ಅಧ್ಯಕ್ಷ
1994 : ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ
1994 : ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶದ ಶಾಸಕರಾಗಿ
1999 : ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ
1999 : ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ
1999 : 11ನೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ
2004 : ಮೂರನೇ ಬಾರಿಗೆ ವಿಧಾನಸಭೆ ಪ್ರವೇಶ
2005 : ಬಿಜೆಪಿ ರಾಜ್ಯಾಧ್ಯಕ್ಷ (ಕರ್ನಾಟಕದ ರಾಜ್ಯ)
2006 : ಕಂದಾಯ ಇಲಾಖೆಯ ಮಂತ್ರಿ (ಬಿಜೆಪಿ ಮತ್ತು ಜೆಡಿ(ಎಸ್) ಸಮ್ಮಿಶ್ರ ಸರ್ಕಾರ
2008 : ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶ
2008 : 13 ನೇ ವಿಧಾನಸಭೆ ಸಭಾದ್ಯಕ್ಷರು
2009 : ಗಾಮೀಣ ಅಭಿವೃದ್ಧಿ (ಪಂಚಾಯತ್ ರಾಜ್) ಇಲಾಖೆಯ ಸಚಿವರು (ಬಿಜೆಪಿ) ಸರ್ಕಾರ
2012 : ಜುಲೈ 12ರಂದು ಗುರುವಾರ ಮಧ್ಯಾಹ್ನ,12ಕ್ಕೆ ಸರಿಯಾಗಿ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
2013 : ಐದನೇ ಬಾರಿಗೆ ವಿಧಾನಸಭೆ ಪ್ರವೇಶ
2018 : ಆರನೇ ಬಾರಿಗೆ ವಿಧಾನಸಭೆಯ ವಿಧಾನಸಭೆ ಪ್ರವೇಶ