ಕರ್ನಾಟಕ

karnataka

ETV Bharat / state

ವಿನಯ್‌ ಕುಲಕರ್ಣಿಗೆ ಜಾಮೀನು‌ ಸಿಕ್ಕರೂ ಸದ್ಯಕ್ಕಿಲ್ಲ ರಿಲೀಫ್ : ಮನೆಯತ್ತ ಕಾರ್ಯಕರ್ತರ ದೌಡು - ವಿನಯ್ ಕುಲಕರ್ಣಿಗೆ ಸುಪ್ರೀಂನಿಂದ ಷರತ್ತುಬದ್ಧ ಜಾಮೀನು

ಸುಪ್ರೀಂಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಕಲ್ಯಾಣನಗರದಲ್ಲಿರುವ ವಿನಯ್ ಮನೆಗೆ ಕಾರ್ಯಕರ್ತರು ದೌಡಾಯಿಸುತ್ತಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ..

ಮಾಜಿ ಸಚಿವ ವಿನಯ್​​ ಕುಲಕರ್ಣಿ
former MLA Vinay Kulkarni

By

Published : Aug 11, 2021, 3:02 PM IST

Updated : Aug 11, 2021, 3:19 PM IST

ಧಾರವಾಡ :ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್​​ ಕುಲಕರ್ಣಿಗೆ ಸುಪ್ರೀಂಕೋರ್ಟ್​ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ, ವಿನಯ್​ ಹೊರ ಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.

ವಿನಯ್ ಮನೆ ಮುಂದೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು

ವಿನಯ್​​ ಕುಲಕರ್ಣಿ ಮೇಲೆ ಸಾಕ್ಷಿ ನಾಶ ಕುರಿತ ಪ್ರಕರಣವೊಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಿರಸ್ಕಾರಗೊಂಡಿತ್ತು. ಹೀಗಾಗಿ, ಜಾಮೀನಿಗಾಗಿ ಬೆಂಗಳೂರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ವಿನಯ್‌ಗೆ ಸದ್ಯಕ್ಕೆ ರಿಲೀಫ್ ಸಿಗುವ ಸಾಧ್ಯತೆ ಕಡಿಮೆ.

ಪಟಾಕಿ ಸಿಡಿಸಿ ಕಾರ್ಯಕರ್ತರಿಂದ ಸಂಭ್ರಮ :ಇನ್ನು ಸುಪ್ರೀಂಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಕಲ್ಯಾಣನಗರದಲ್ಲಿರುವ ವಿನಯ್ ಮನೆಗೆ ಕಾರ್ಯಕರ್ತರು ದೌಡಾಯಿಸುತ್ತಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂನಿಂದ ಷರತ್ತುಬದ್ಧ ಜಾಮೀನು

Last Updated : Aug 11, 2021, 3:19 PM IST

ABOUT THE AUTHOR

...view details