ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಶಾಮಿಯಾನ ಸಪ್ಲಯರ್ಸ್ ಮೇಲೆ ತೆರಿಗೆ ಅಧಿಕಾರಿಗಳಿಂದ ದಾಳಿ - ಹುಬ್ಬಳ್ಳಿ ಶಾಮಿಯಾನಾ ಸಪ್ಲಯರ್ಸ್

ನಗರದ ಹುಬ್ಬಳ್ಳಿ ಶಾಮಿಯಾನ ಸಪ್ಲಯರ್ಸ್‌ ಮಾಲೀಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

IT ride on Hubli shamiyana supplyers
'ಹುಬ್ಬಳ್ಳಿ ಶಾಮಿಯಾನಾ ಸಪ್ಲಯರ್ಸ್' ಮೇಲೆ ಐಟಿ ದಾಳಿ

By

Published : Feb 27, 2020, 8:11 AM IST

ಹುಬ್ಬಳ್ಳಿ:ನಗರದ ಹುಬ್ಬಳ್ಳಿ ಶಾಮಿಯಾನ ಸಪ್ಲಯರ್ಸ್ ಮಾಲೀಕರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ ಶಾಮಿಯಾನ ಸಪ್ಲಯರ್ಸ್ ಜಿಲ್ಲೆಯ ಪೂರ್ಣಚಂದ್ರ ಮತ್ತು ಶ್ರೀನಿವಾಸ ಘಂಟಸಾಲ್‌ ಸಹೋದರರಿಗೆ ಸೇರಿದ್ದಾಗಿದೆ. ರಾಜ್ಯದ ವಿವಿಧೆಡೆ ನಡೆಯುವ ಬೃಹತ್ ಸಭೆ, ಸಮಾರಂಭಗಳಿಗೆ ಶಾಮಿಯಾನಾ ಪೂರೈಸುತ್ತಿದ್ದು ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಆದರೆ, ಇವರ ಮೇಲೆ ತೆರಿಗೆ ವಂಚನೆ ಆರೋಪವಿದ್ದು, 15 ಮಂದಿ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಹುಬ್ಬಳ್ಳಿಯ ಮಥುರಾ ಕಾಲೊನಿಯ ಮನೆ ಮತ್ತು ಕುಸುಗಲ್ ರಸ್ತೆಯ ಅಂಗಡಿಗೆ ಆಗಮಿಸಿರುವ ಅಧಿಕಾರಿಗಳು ವಹಿವಾಟಿನ ಕುರಿತಾದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮುಂದುವರೆಸಿದ್ದಾರೆ.

ABOUT THE AUTHOR

...view details