ಧಾರವಾಡ: ಧಾರವಾಡ ಕಾಂಗ್ರೆಸ್ ಮುಖಂಡರೊಬ್ಬರ ಆಪ್ತ, ಗುತ್ತಿಗೆದಾರ ಯು.ಬಿ.ಶೆಟ್ಟಿ ಮನೆಯ ಮೇಲೆ ಐಟಿ (ಆದಾಯ ತೆರಿಗೆ) ದಾಳಿ ನಡೆದಿದೆ.
ಧಾರವಾಡ ನಗರದ ದಾಸನಕೊಪ್ಪ ಸರ್ಕಲ್‌ನಲ್ಲಿರುವ ನಿವಾಸಕ್ಕೆ ಗೋವಾದಿಂದ ಬಂದಿರುವ ಐಟಿ ಅಧಿಕಾರಿಗಳು ದಾಖಲೆಗಳ ಶೋಧ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಉಪ್ಪುಂದ, ಬೈಂದೂರಿನಲ್ಲಿರುವ ಆಸ್ತಿ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೋದರನ ಮನೆ ಮೇಲೂ ದಾಳಿ:
ಇದೇ ವೇಳೆ ಯು.ಬಿ.ಶೆಟ್ಟಿಯವರ ಸೋದರ ಸೀತಾರಾಮ ಶೆಟ್ಟಿ ನಿವಾಸದ ಮೇಲೆಯೂ ಐಟಿ ದಾಳಿ ನಡೆದಿದೆ. ಇವರೂ ಕೂಡ ಗುತ್ತಿಗೆದಾರರಾಗಿದ್ದು, ಧಾರವಾಡದ ವಿನಾಯಕ ನಗರದಲ್ಲಿನ ಮನೆಯಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ.
ಕಾಂಗ್ರೆಸ್ ಮುಖಂಡನ ಆಪ್ತನ ಮನೆ ಮೇಲೆ ಐಟಿ ದಾಳಿ ಇದನ್ನೂ ಓದಿ: ಹೆಸರು:ಅಶೋಕ್ ಖೇಮ್ಕಾ, ಉದ್ಯೋಗ: IAS ಅಧಿಕಾರಿ, ತಪ್ಪು: ಪ್ರಾಮಾಣಿಕತೆ, ಶಿಕ್ಷೆ: 54 ಬಾರಿ ವರ್ಗಾವಣೆ!