ಕರ್ನಾಟಕ

karnataka

ETV Bharat / state

ಅತ್ಯಾಚಾರಿಗಳ ಎನ್​ಕೌಂಟರ್​ನಲ್ಲಿ ತಪ್ಪು ಹುಡುಕುವುದು ಸರಿಯಲ್ಲ: ಶೆಟ್ಟರ್ - Hyderabad enCounter Case

ಅತ್ಯಾಚಾರಿ ಆರೋಪಿಗಳ ಎನ್​ಕೌಂಟರ್​ನಲ್ಲಿ ತಪ್ಪು ಹುಡುಕುವುದು ಸರಿಯಲ್ಲ. ಇದು ಪ್ಲಾನ್​ ಪ್ರಕಾರ ನಡೆದಿಲ್ಲ. ಎನ್​ಕೌಂಟರ್​ಗಳನ್ನು ಪ್ಲಾನ್ ಮಾಡಿ ಮಾಡಲಾಗುವುದಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

dharwad
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

By

Published : Dec 7, 2019, 7:24 PM IST

ಧಾರವಾಡ: ಅತ್ಯಾಚಾರಿಗಳ ಎನ್‌ಕೌಂಟರ್‌ನಲ್ಲಿ ತಪ್ಪು ಹುಡುಕುವುದು ಸರಿಯಲ್ಲ, ಅತ್ಯಾಚಾರ ಪ್ರಕರಣದ ಬಗ್ಗೆ ಜನರಲ್ಲಿ ಒಂದು ಆಕ್ರೋಶವಿತ್ತು. ದೆಹಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದ್ರು ಇನ್ನು ಪ್ರಕ್ರಿಯೆ ಆಗಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೈದ್ರಾಬಾದ್​ ಎನ್​ಕೌಂಟರ್​ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯಗಳಿಂದ ನ್ಯಾಯ ಬೇಗ ಸಿಗುತ್ತಿಲ್ಲ ಎನ್ನುವ ಭಾವನೆ ಜನರಲ್ಲಿತ್ತು. ಅಪರಾಧ ಸಾಬೀತಾದ್ರೂ ಶಿಕ್ಷೆ ವಿಳಂಬ ಆಗುತ್ತಿದೆ ಎಂಬ ಭಾವನೆ ಜನರಲ್ಲಿದೆ. ಹೀಗಾಗಿ ಈ ಎನ್‌ಕೌಂಟರ್‌ನಿಂದ ಜನ ನಮಗೆ ನ್ಯಾಯ ಸಿಕ್ಕಿದೆ ಎಂದು ಭಾವಿಸಿದ್ದಾರೆ ಎಂದರು.

ಹಾಗೆಂದು ಎನ್​ಕೌಂಟರ್​ನಲ್ಲಿ ತಪ್ಪು ಹುಡುಕುವ ಕೆಲಸ ಆಗಬಾರದು. ಮಾನವ ಹಕ್ಕು ಆಯೋಗ ತನಿಖೆ ಮಾಡುತ್ತಿದೆ. ಅವರಿಗೆ ಹಕ್ಕಿದೆ ತನಿಖೆ ಮಾಡಿಕೊಳ್ಳಲಿ. ಈ ಎನ್‌ಕೌಂಟರ್‌ನಿಂದ ನಮ್ಮ ಹುಬ್ಬಳ್ಳಿಯ ವಿಶ್ವನಾಥ ಸಜ್ಜನರ್‌ರಿಗೆ ಇಡೀ ದೇಶದಲ್ಲಿ ಶಹಬ್ಬಾಸ್‌ಗಿರಿ ಸಿಗುತ್ತಿದೆ. ಇದರಿಂದಾಗಿ ನ್ಯಾಯ ಕೊಡುವ ಕೆಲಸ ಆಗಿದೆ ಎಂದು ಸಮಾಧಾನ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಎನ್‌ಕೌಂಟರ್ ಮಾಡಬೇಕು ಎಂದು ಹೈದ್ರಾಬಾದ್ ಪೊಲೀಸರು ಮಾಡಿಲ್ಲ ಆರೋಪಿಗಳು ಅಟ್ಯಾಕ್ ಮಾಡಿದ್ದಕ್ಕೆ ಪೊಲೀಸರು ಅಟ್ಯಾಕ್ ಮಾಡಿದ್ದಾರೆ. ಆ ಘಟನೆ ಬಗ್ಗೆ ಪ್ರಶಂಸೆ ಇದೆ ಎಲ್ಲರೂ ಅದನ್ನು ಪ್ರಶಂಸಿಸಬೇಕು. ಎನ್‌ಕೌಂಟರ್ ಆಕಸ್ಮಿಕವಾಗಿ ನಡೆಯುತ್ತಿರುವಂತಹುದು. ಉತ್ತರ ಪ್ರದೇಶದ ಕೇಸ್‌ನಲ್ಲಿಯೂ ಎನ್‌ಕೌಂಟರ್ ಮಾಡಿ ಬಿಸಾಕಿ ಅಂತಾ ಹೇಳೋಕೆ ಬರೊಲ್ಲ, ಏಕೆಂದರೆ ಪ್ಲ್ಯಾನ್ ಮಾಡಿ ಎನ್‌‌ಕೌಂಟರ್ ಮಾಡಲು ಬರೋದಿಲ್ಲ, ಇದನ್ನು ನಾನು ಪ್ಲ್ಯಾನ್ ಅನ್ನೋದಿಲ್ಲ, ಆಕಸ್ಮಿಕವಾಗಿ ನಡೆದಿರುವ ಘಟನೆ. ಕೆಲವರು ಇದನ್ನು ವಿರೋಧಿಸ್ತಾ ಇದ್ದಾರೆ, ಅದು ಅವರ ವೈಯಕ್ತಿಕ ನಿಲುವು ಎಂದಿದ್ದಾರೆ.

ABOUT THE AUTHOR

...view details