ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಬಟ್ಟೆ ಅಂಗಡಿಗಳ ಮೇಲೆ ಐಟಿ ದಾಳಿ... ಬೆಚ್ಚಿಬಿದ್ದ ವ್ಯಾಪಾರಸ್ಥರು!

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ತೆರಿಗೆ ವಂಚಿಸಿ ಬಟ್ಟೆ ವ್ಯಾಪಾರ ವಹಿವಾಟು ನಡೆಸುತ್ತಿರುವ ಬಟ್ಟೆ ಅಂಗಡಿಗಳ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

IT attack on Hubli cloth shop
ತೆರಿಗೆ ವಂಚಿಸಿ ಬಟ್ಟೆ ವ್ಯಾಪಾರ : ವಾಣಿಜ್ಯನಗರಿಯಲ್ಲಿ ಐಟಿ ದಾಳಿ

By

Published : Dec 5, 2019, 9:13 PM IST

ಹುಬ್ಬಳ್ಳಿ:ತೆರಿಗೆ ವಂಚನೆ ಮಾಡಿ ಬಟ್ಟೆ ವ್ಯಾಪಾರ ವಹಿವಾಟು ನಡೆಸುತ್ತಿರುವ ಆರೋಪದ ಮೇಲೆ ಬಟ್ಟೆ ಅಂಗಡಿಗಳ ಮೇಲೆ ಐಟಿ ಅಧಿಕಾರಿಗಳ ಹದ್ದಿನ ಕಣ್ಣು ಬಿದ್ದಿದ್ದು, ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಆ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.

ತೆರಿಗೆ ವಂಚಿಸಿ ಬಟ್ಟೆ ವ್ಯಾಪಾರ ಆರೋಪ: ವಾಣಿಜ್ಯನಗರಿಯಲ್ಲಿ ಐಟಿ ದಾಳಿ

ವಾಣಿಜ್ಯನಗರಿ ಹುಬ್ಬಳ್ಳಿಗೆ ಇಪ್ಪತ್ತಕ್ಕೂ ಹೆಚ್ಚು ವಾಹನಗಳ ಮೂಲಕ ಲಗ್ಗೆ ಇಟ್ಟಿರುವ ಐಟಿ ಅಧಿಕಾರಿಗಳು, ನಗರದ ದಾಜೀಬಾನ ಪೇಟೆಯಲ್ಲಿರುವ ಗಂಗಾವತಿ ಸಿಲ್ಕ್ ಪ್ಯಾಲೇಸ್ ಹಾಗೂ ಎಸ್.ಟಿ.ಭಂಡಾರಿ ಅಂಗಡಿ ಸೇರಿದಂತೆ ಮುವತ್ತಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ರಸೀದಿ ನೀಡಿ ಸರ್ಕಾರಕ್ಕೆ ತೆರಿಗೆ ನೀಡುವಲ್ಲಿ ವಂಚಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ನಿತ್ಯ ಕೋಟ್ಯಂತರ ರೂಪಾಯಿ ಬಟ್ಟೆಗಳ ವ್ಯಾಪಾರ ನಡೆಯುತ್ತಿದ್ದು, ಎಗ್ಗಿಲ್ಲದೇ ನಡೆಯುತ್ತಿರುವ ತೆರಿಗೆ ವಂಚನೆಗೆ ಕಡಿವಾಣ ಹಾಕಲು ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾಋಎ. ಈ ದಾಳಿಯಿಂದ ವ್ಯಾಪಾರಸ್ಥರು ಬೆಚ್ಚಿಬಿದ್ದಿದ್ದಾರೆ.

ABOUT THE AUTHOR

...view details