ಕರ್ನಾಟಕ

karnataka

ETV Bharat / state

ಕರ್ನಾಟಕ ಮಟೀರಿಯಲ್ ಟೆಸ್ಟಿಂಗ್ ಆ್ಯಂಡ್​ ರಿಸರ್ಚ್ ಸೆಂಟರ್ ಸಂಸ್ಥೆಗೆ ಲೀಸ್ ಪತ್ರ ವಿತರಣೆ - Karnataka Material Testing and Research Center

ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ಇಂಡಸ್ಟ್ರಿಯಲ್ ವಸಾಹತುವಿನಲ್ಲಿರುವ G4, G5 ಶೆಡ್ಡುಗಳನ್ನು 99 ವರ್ಷಗಳ ಕಾಲ ಕರ್ನಾಟಕ ಮಟಿರಿಯಲ್ ಟೆಸ್ಟಿಂಗ್ ಆ್ಯಂಡ್ ಸೆಂಟರ್ ಸಂಸ್ಥೆಗೆ ಲೀಸ್ ಗೆ ನೀಡುವ ಪತ್ರವನ್ನು ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

Hubli
Hubli

By

Published : Aug 3, 2020, 3:25 PM IST

ಹುಬ್ಬಳ್ಳಿ:ಕರ್ನಾಟಕ ಮಟಿರಿಯಲ್ ಟೆಸ್ಟಿಂಗ್ ಆ್ಯಂಡ್ ಸೆಂಟರ್ ಸಂಸ್ಥೆಗೆ ಗೋಕುಲ ರಸ್ತೆಯ ಇಂಡಸ್ಟ್ರಿಯಲ್ ವಸಾಹತುವಿನಲ್ಲಿರುವ G4, G5 ಶೆಡ್ಡುಗಳನ್ನು 99 ವರ್ಷಗಳ ಕಾಲ ಲೀಸ್ ಗೆ ನೀಡುವ ಪತ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದು ತಮ್ಮ ನಿವಾಸದಲ್ಲಿ ಹಸ್ತಾಂತರಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಡಿಯಲ್ಲಿ ಸ್ಥಾಪಿಸಿದ ಕರ್ನಾಟಕ ಮಟಿರಿಯಲ್ ಟೆಸ್ಟಿಂಗ್ ಆ್ಯಂಡ್ ಸೆಂಟರ್ ಸಂಸ್ಥೆ ಎನ್.ಎ.ಬಿ.ಎಲ್ (ನ್ಯಾಷನಲ್ ಅಕ್ರಿಡಿಯೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅ್ಯಂಡ್ ಕ್ಯಾಲಿಬರೇಷನ್ ಲ್ಯಾಬೋರೇಟರಿಸ್) ಪ್ರಮಾಣಪತ್ರ ಹೊಂದಿದೆ.

ಕಳೆದ 25 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಕೈಗಾರಿಕೆಗಳಿಗೆ, ವಸ್ತುಗಳ ಗುಣಮಟ್ಟ ಪರೀಕ್ಷಿಸಿ ಕೊಡುತ್ತಿದೆ. ಲೀಸ್ ಪತ್ರ ನೀಡುವ ಮುಖಾಂತರ ಪರೀಕ್ಷಾ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಒತ್ತು ನೀಡಿದೆ. ಉದ್ದಿಮೆದಾರರ ಬೇಡಿಕೆಗೆ ಅನುಸಾರವಾಗಿ ಇನ್ನೂ ಹೆಚ್ಚಿನ ಪ್ರಮಾಣದ ಟೆಸ್ಟಿಂಗ್ ಅನುಕೂಲತೆಯನ್ನು ಒದಗಿಸಲು ಸಂಸ್ಥೆಯನ್ನು‌ ಮೇಲ್ದರ್ಜೆಗೆ ಏರಿಸಲಾಗುವ ಗುರಿ ಹೊಂದಿದೆ.

ಈ ಸಂದರ್ಭದಲ್ಲಿ ಕೆ.ಎಸ್.ಎಸ್.ಐ‌.ಡಿ.ಸಿ ಅಧಿಕಾರಿ ಡಿ.ಹೆಚ್. ನಾಗೇಶ್, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ಮೋಹನ ಭರಮಕ್ಕನವರ, ಪರೀಕ್ಷಣ ಕೇಂದ್ರದ ಅಧ್ಯಕ್ಷ ನಾಗರಾಜ ದಿವಾಟೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಜಾಡರ್, ಕಾರ್ಯನಿರ್ವಾಹಕ ‌ಅಧಿಕಾರಿ ನರೇಂದ್ರ ಕುಲಕರ್ಣಿ, ಉಪಾಧ್ಯಕ್ಷ ಜಯಪ್ರಕಾಶ್ ತೆಂಗಿನಕಾಯಿ, ಸಹ ಕಾರ್ಯದರ್ಶಿ ಎಂ.ಕೆ.ಪಾಟೀಲ, ಖಾಜಾಂಚಿ ಹೇಮಂತ್‌ ಉಪಸ್ಥಿತರಿದ್ದರು.

ABOUT THE AUTHOR

...view details