ಕರ್ನಾಟಕ

karnataka

ETV Bharat / state

ಆರು ತಿಂಗಳ ತೆರಿಗೆ ವಿನಾಯ್ತಿ ನೀಡಿ: ಮ್ಯಾಕ್ಸಿ ಕ್ಯಾಬ್ ಸಂಘ ಆಗ್ರಹ - ಕೊರೊನಾ ವೈರಸ್ ಭೀತಿಯಿಂದ ಲಾಕ್​ಡೌನ್

ಮ್ಯಾಕ್ಸಿ ಕ್ಯಾಬ್ ಉದ್ಯಮವನ್ನು ನಂಬಿರುವ ಸಾವಿರಾರು ಚಾಲಕರು ಹಾಗೂ ಮಾಲೀಕರು ಕೊರೊನಾ ಮಹಾಮಾರಿ ವೈರಸ್​ನಿಂದ ಸಂಕಷ್ಟ ಎದುರಿಸುವಂತಾಗಿದೆ‌‌.

Maxicab Association
ಮ್ಯಾಕ್ಸಿಕ್ಯಾಬ್ ಸಂಘ

By

Published : May 26, 2020, 1:21 PM IST

ಧಾರವಾಡ: ಮ್ಯಾಕ್ಸಿ ಕ್ಯಾಬ್​​​ಗಳಿಗೆ ಆರು ತಿಂಗಳ ತೆರಿಗೆ ವಿನಾಯತಿ ನೀಡಬೇಕು ಮತ್ತು ಚಾಲಕ ಹಾಗೂ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಉತ್ತರ ಕರ್ನಾಟಕ ಮ್ಯಾಕ್ಸಿ ಕ್ಯಾಬ್ ಮಾಲೀಕರ ಒಕ್ಕೂಟದ ಸದಸ್ಯರು ಆಗ್ರಹಿಸಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದ ಲಾಕ್​ಡೌನ್​​ ಮಾಡಲಾಗಿದೆ. ಪರಿಣಾಮ ಮ್ಯಾಕ್ಸಿ ಕ್ಯಾಬ್ ಉದ್ಯಮ ನಲುಗಿ ಹೋಗಿದೆ. ಹೀಗಾಗಿ ನಮ್ಮ ಬೇಡಿಕೆಗಳು ಹಲವು ಬಾರೀ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ದಯವಿಟ್ಟು ಮುಂಗಡ ಪತ್ರದಲ್ಲಿ ಮಂಡಿಸಿರುವ ದುಬಾರಿ ತೆರಿಗೆ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಮ್ಯಾಕ್ಸಿ ಕ್ಯಾಬ್ ಸಂಘ
ಮ್ಯಾಕ್ಸಿ ಕ್ಯಾಬ್ ಉದ್ಯಮವನ್ನು ನಂಬಿರುವ ಸಾವಿರಾರು ಚಾಲಕರು ಹಾಗೂ ಮಾಲೀಕರು ಕೊರೊನಾ ಮಹಾಮಾರಿ ವೈರಸ್​ನಿಂದ ಸಂಕಷ್ಟ ಎದುರಿಸುವಂತಾಗಿದೆ‌‌. ಇದೀಗ ಈ ಉದ್ಯೋಗ ನಂಬಿಕೊಂಡ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಸದ್ಯ ತೆರಿಗೆ ಕಟ್ಟಲಾಗದ ಸ್ಥಿತಿಯಲ್ಲಿದ್ದೇವೆ. ಇನ್ನೂ ಹೆಚ್ಚಿನ ತೆರಿಗೆ ಕಟ್ಟಲು ನಮ್ಮಿಂದ ಸಾಧ್ಯವಿಲ್ಲ ಎಂದು ಈಟಿವಿ ಭಾರತದೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ಹಣ ಮಂಜೂರು ಮಾಡಿದೆ. ಅದೇ ರೀತಿ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಹಾಗೂ ಮಾಲೀಕರಿಗೆ ಪರಿಹಾರ ನೀಡಬೇಕು. ಲಾಕ್​ಡೌನ್​​ 3.0ರಲ್ಲಿ ಮ್ಯಾಕ್ಸಿ ಕ್ಯಾಬ್ ವಾಹನದಲ್ಲಿ ಮೂರು ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಆದೇಶಿಸಿದೆ. ಆದ್ರೆ ನಮಗೆ ಕನಿಷ್ಠ 12 ಜನ ಹಾಕಿಕೊಂಡು ಉದ್ಯೋಗ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.

ABOUT THE AUTHOR

...view details