ಧಾರವಾಡ: ವಿಶ್ವವಿದ್ಯಾಲಯದ ನಾಯಕರೆಂದೇ ಗುರುತಿಸಿಕೊಳ್ಳುವ ಕುಲಪತಿ ಅವರ ಸ್ಥಾನ ಗೌರವಾನ್ವಿತ ಹುದ್ದೆ. ಅವರ ಪಾತ್ರ ಬಹಳ ಮಹತ್ವದ್ದಾಗಿರುತ್ತೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಕಾರ್ಯ ನಿರ್ವಾಹಕ ಅಥವಾ ಔಪಚಾರಿಕ ಮುಖ್ಯಸ್ಥರಾಗಿರುತ್ತಾರೆ. ಅವರ ಕಾರ್ಯ ವೈಖರಿಯ ಮೇಲೆ ವಿವಿಗಳ ಅಭಿವೃದ್ಧಿ ನಿರ್ಧಾರವಾಗುತ್ತವೆ. ಆದ್ರೆ, ಅವರ ನೇಮಕ ಪ್ರಾಮಾಣಿಕವಾಗಿ ನಡೆಯುತ್ತಾ ಎಂಬುದು ಇದೀಗ ಯಕ್ಷ ಪ್ರಶ್ನೆ.
ರಾಜ್ಯದಲ್ಲಿ ಹಲವು ವಿಶ್ವವಿದ್ಯಾಲಯಗಳಿವೆ. ಅಲ್ಲಿ ಒಬ್ಬರು ಕುಲಪತಿಗಳು ಬೇಕೆ ಬೇಕು. ಇಂದಿನ ಕುಲಪತಿಗಳ ಆಯ್ಕೆ ಪ್ರಕ್ರಿಯೆ ರಾಜಕೀಯ, ಜಾತಿ ವ್ಯವಸ್ಥೆ, ಹಣಬಲದ ಮೇಲೆ ನಿಂತಿದೆ ಎಂಬುದು ಕೆಲವರ ಆರೋಪ.
ಈ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಹಾಗೂ ಮಾಜಿ ಸಿಂಡಿಕೇಟ್ ಸದಸ್ಯ ಜಯಂತ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿರುವುದು ಸಾಮಾನ್ಯವಾಗಿದೆ. ಸರ್ಚ್ ಕಮಿಟಿ ಮೆಂಬರ್ಗಳು ಕುಲಪತಿಗಳಾಗಿರುವುದು ಕಾಂಟ್ರೋವರ್ಸಿಯಾಗಿದೆ. ಸರ್ಚ್ ಕಮಿಟಿ ಮಾಡುವುದರಿಂದ ಉತ್ತಮ ಕುಲಪತಿ ನೇಮಕ ಮಾಡಲು ಸಾಧ್ಯವಾಗಲ್ಲ ಎಂಬುದು ಅವರ ವಾದ.