ಕರ್ನಾಟಕ

karnataka

ETV Bharat / state

ಕೋವಿಡ್​ - ಲಾಕ್​​ಡೌನ್​​ನಿಂದ ಹೆಚ್ಚಾಯಿತೇ ಅಪರಾಧ ಪ್ರಕರಣಗಳು? - Increasing criminal cases at hubli

ಕೋವಿಡ್​ ಮತ್ತು ಲಾಕ್​ಡೌನ್​​​ನಿಂದ ಸೃಷ್ಟಿಯಾದ ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆ, ಸಂಬಳಕ್ಕೆ ಕತ್ತರಿ ಹೀಗೆ ಹತ್ತು-ಹಲವು ಸಂಕಷ್ಟಗಳಿಂದಾಗಿ ಹಲವರು ಕಳ್ಳತನದಂತಹ ದುಷ್ಕೃತ್ಯಗಳಿಗೆ ಇಳಿದಿದ್ದಾರೆ.

Is Increasing criminal cases from covid - Lockdown?
ಕೋವಿಡ್​-ಲಾಕ್​​ಡೌನ್​​ನಿಂದ ಹೆಚ್ಚಾಯಿತೇ ಅಪರಾಧ ಪ್ರಕರಣಗಳು?

By

Published : Feb 24, 2021, 1:53 PM IST

ಹುಬ್ಬಳ್ಳಿ: ಕಳೆದ ವರ್ಷಾರಂಭದಲ್ಲಿ ಮಹಾಮಾರಿ ಕೊರೊನಾ ಸೋಂಕು ದೇಶಕ್ಕೆ ಕಾಲಿಟ್ಟು ಅವಾಂತರವನ್ನೇ ಸೃಷ್ಟಿಸಿಬಿಡ್ತು. ಕೋವಿಡ್​ ತಡೆಗೆ ಹೇರಲಾದ ಲಾಕ್​ಡೌನ್​​ ಮತ್ತಷ್ಟು ಸಂಕಷ್ಟಕ್ಕೆ ಎಡೆಮಾಡಿ ಕೊಟ್ಟಿತು. ಇದರಿಂದ ಸೃಷ್ಟಿಯಾದ ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆ, ಸಂಬಳಕ್ಕೆ ಕತ್ತರಿ ಹೀಗೆ ಹತ್ತು - ಹಲವು ಸಂಕಷ್ಟಗಳಿಂದಾಗಿ ಹಲವರು ಕಳ್ಳತನದಂತಹ ದುಷ್ಕೃತ್ಯಗಳಿಗೆ ಇಳಿಯುತ್ತಿರುವುದು ಮಾತ್ರ ಆಘಾತಕಾರಿ ವಿಷಯ.

ಹೆಚ್ಚು ಪ್ರಕರಣಗಳು ವರದಿ:

ನಗರದಲ್ಲಿ ಇತ್ತೀಚೆಗೆ ನಡೆದ ದರೋಡೆ, ಸುಲಿಗೆ ಪ್ರಕರಣಗಳಲ್ಲಿ ಹಳೆಯ ಅಪರಾಧಿಗಳೊಂದಿಗೆ ಹೊಸಬರು ಕೂಡ ಭಾಗಿಯಾಗಿರುವ ಮಾಹಿತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಲಾಕ್‌ಡೌನ್‌ ಎಫೆಕ್ಟ್‌ನಿಂದ ನಗರದಲ್ಲಿ ಸುಲಿಗೆ, ದರೋಡೆ ಮತ್ತು ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಹೆಚ್ಚು ಅಪರಾಧ ಕೃತ್ಯಗಳು ದಾಖಲಾಗಿದ್ದು, ಸಾರ್ವಜನಿಕರನ್ನು ಆತಂಕಕ್ಕೀಡಾಗುವಂತೆ ಮಾಡಿದೆ.

ಹುಬ್ಬಳ್ಳಿಯಲ್ಲಿ ವರದಿಯಾದ ಅಪರಾಧ ಪ್ರಕರಣಗಳ ಮಾಹಿತಿ ನೀಡಿದ ಡಿಸಿಪಿ

ಹಳೆಬರೊಂದಿಗೆ ಹೊಸಬರು:

ಅಷ್ಟೇ ಅಲ್ಲದೆ ಹಳೆಯ ವೃತ್ತಿಪರ ಅಪರಾಧಿಗಳೊಂದಿಗೆ ಹೊಸಬರು ಕೂಡ ಈ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಇದರ ನಡುವೆಯೂ ನಗರ ಪೊಲೀಸರು, ಅಪರಾಧ ಕೃತ್ಯವೆಸಗಿ ತಲೆ ಮರೆಸಿಕೊಂಡಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಪೊಲೀಸರ ಕ್ರಮ:

ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯೂ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಹಳೇ ಕಳ್ಳರ ಜೊತೆಗೆ ಹೊಸಬರನ್ನು ಹಿಡಿಯುವುದರ ಸಲುವಾಗಿ ನೈಟ್ ಬೀಟ್ ಹೆಚ್ಚಿಸಲಾಗಿದೆ. ಸಿಸಿಟಿವಿ ಕ್ಯಾಮರಾಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿಸಲಾಗಿದೆ. ಅದರಲ್ಲೂ ಅತೀ ಹೆಚ್ಚು ಕಳ್ಳತನವಾಗುವ ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಈ ಸುದ್ದಿಯನ್ನೂ ಓದಿ:ಲಾಕ್​ಡೌನ್​ ಎಫೆಕ್ಟ್​: 10 ಸಾವಿರ ಕ್ರೀಡಾಪಟುಗಳ ಕ್ರೀಡಾ ಚಟುವಟಿಕೆ ಸ್ಥಗಿತ

ಅಂದಿನ ಲಾಕ್‌ಡೌನ್ ಎಫೆಕ್ಟ್ ಜನರನ್ನು ಕ್ರಿಮಿನಲ್ ಚಟುವಟಿಕೆಗಳಾದ ಕಳ್ಳತನ, ದರೋಡೆ ಮಾಡುವ ಹಂತಕ್ಕೆ ಪ್ರಚೋದನೆ ನೀಡುತ್ತಿರುವುದಕ್ಕೆ ಪೊಲೀಸ್ ಇಲಾಖೆಗೂ ತಲೆನೋವಾಗಿದ್ದು, ಇನ್ನು ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ.

ABOUT THE AUTHOR

...view details