ಕರ್ನಾಟಕ

karnataka

ETV Bharat / state

ಐ.ಆರ್​.ಡಿ.ಎ.ಐ ಇದೀಗ ವಿಮಾ ಕಂಪನಿಗಳನ್ನು ನಿಯಂತ್ರಿಸುತ್ತಿದೆ: ಎಂ. ನಾರಾಯಣ ಹೆಗಡೆ

ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ಐಆರ್​ಡಿಎಐ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದ್ದು, ಇದೀಗ 2019 ರ ಕರಡನ್ನು ಸಿದ್ಧಪಡಿಸಿದೆ. ಈ ಕರಡಿನಿಂದ ಸ್ವತಂತ್ರ ಸರ್ವೇಯರ್​ಗೆ ಅನ್ಯಾಯವಾಗುತ್ತಿದ್ದು, ಅಲ್ಲದೇ ಬಹುಪಾಲು ಜನರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಸರ್ವೇಯರ್ಸ್ ಆ್ಯಂಡ್ ಲಾಸ್ ಅಸೋಶಿಯೇಷನ್ಸ್​ ಸದಸ್ಯ ಎಂ ನಾರಾಯಣ ಹೆಗಡೆ ಹೇಳಿದರು.

ಐ.ಆರ್​.ಡಿ.ಎ.ಐ ಇದೀಗ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದೆ : ಎಮ್‌ ನಾರಾಯಣ ಹೆಗಡೆ

By

Published : Nov 17, 2019, 11:20 AM IST

ಹುಬ್ಬಳ್ಳಿ:ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ಐಆರ್​ಡಿಎಐ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದ್ದು, ಇದೀಗ 2019 ರ ಕರಡನ್ನು ಸಿದ್ಧಪಡಿಸಿದೆ. ಈ ಕರಡಿನಿಂದ ಸ್ವತಂತ್ರ ಸರ್ವೇಯರ್​ಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಬಹುಪಾಲು ಜನರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಸರ್ವೇಯರ್ಸ್ ಆ್ಯಂಡ್ ಲಾಸ್ ಅಸೋಶಿಯೇಷನ್​ ಸದಸ್ಯ ಎಂ ನಾರಾಯಣ ಹೆಗಡೆ ಹೇಳಿದ್ರು.

ಐ.ಆರ್​.ಡಿ.ಎ.ಐ ಇದೀಗ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದೆ : ಎಂ ನಾರಾಯಣ ಹೆಗಡೆ

ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹೊಸ ಕರಡು ನಿಯಮ ಜಾರಿಯಾದರೆ ಖಾಸಗಿ ಕಂಪನಿಗಳಿಗೆ ಈಗಿರುವ ನಿರ್ಬಂಧಿತ 50 ಸಾವಿರ ಮಿತಿಯಿಂದ 75 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾಪ ಇದಾಗಿದ್ದು, ಈ ನಿರ್ಧಾರದಿಂದ ಸ್ವತಂತ್ರ ಸರ್ವೇಯರ್​ಗಳಿಗೆ ಬಾರಿ ಅನ್ಯಾಯವಾಗಲಿದೆ. ಅಲ್ಲದೇ ಕೆಲವು ಖಾಸಗಿ ವಿಮಾ ಕಂಪನಿಗಳು ಕೇಂದ್ರ ಸರ್ಕಾರದ ಅಂಗಸಂಸ್ಥೆ ಐಆರ್​ಡಿಎಐಯ 64 ಯುಎಂನ ನಿಯಮಗಳನ್ನು ಪಾಲಿಸದೆ ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂದು ದೂರಿದರು.

ಐಆರ್ ಡಿಎಐ ಮತ್ತು ಜಿಐಪಿಎಸ್ ಎ ನಿಯಮಗಳ ಅನ್ವಯ ವಿಮಾ ಕಂಪನಿಗಳು ಅಪಘಾತವಾದ ವಾಹನಗಳ ದುರಸ್ತಿ ವೆಚ್ಚ 50 ಸಾವಿರ ರೂ.ಗಳಷ್ಟು ಇದ್ದಾಗ ವಿಮಾ ಕಂಪನಿಗಳು ಪರಿಶೀಲನೆಯನ್ನು ಸ್ವತಂತ್ರ ಸರ್ವೇಯರ್ ಅಥವಾ ಆಯಾ ವಿಮಾ ಸಿಬ್ಬಂದಿ ಮಾಡಬಹುದು. ಅದೇ 50 ಸಾವಿರಕ್ಕಿಂತ ಹೆಚ್ಚು ಇದ್ದಾಗ ಐಆರ್​ಡಿಎಐ ನ 64 ಯುಎಂ ನಿಯಮದಂತೆ ಕಡ್ಡಾಯವಾಗಿ ಸ್ವತಂತ್ರ ಸರ್ವೇಯರ್​ಗಳ ಮುಖೇನ ಪರಿಶೀಲಿಸಿ ಅವರು ಮಾಡಿದ ಶಿಫಾರಸ್ಸಿನಂತೆ ಗ್ರಾಹಕರಿಗೆ ಹಣ ಸಂದಾಯ ಮಾಡಿ, ಜಿಎಪಿಎಸ್​ಎ ಫೀಸ್ ಶೆಡ್ಯೂಲ್ ಪ್ರಕಾರ ಸರ್ವೇಯರ್​ಗೆ ಶುಲ್ಕ ಕೊಡಬೇಕೆಂಬ ನಿಯಮ ಇದೆ. ಆದ್ರೆ ಖಾಸಗಿ ವಿಮಾ ಕಂಪನಿಗಳು ಈ ಯಾವ ನಿಯಮಗಳನ್ನು ಪಾಲಿಸದೆ ಲಾಭಕ್ಕಾಗಿ ಯಾವುದೇ ಪರಿಶೀಲನೆಗೆ ಸಂಬಂಧಿಸಿದ ಅರ್ಹತೆಗಳಿಲ್ಲದ ತಮ್ಮ ಕಂಪನಿಗಳ ಕೆಲಸಾಗಾರರಿಂದಲೇ ವಾಹನಗಳ ಪರಿಶೀಲನೆ ಮಾಡಿಸಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಘಟಕದ ಸದಸ್ಯರು 2018 ಜುಲೈ ನಲ್ಲಿ ಐಆರ್​ಡಿಎಐ ಅಧಿಕಾರಿಗಳಿಗೆ ಖಾಸಗಿ ಕಂಪನಿಗಳು ಮಾಡುತ್ತಿರುವ ಮೋಸದ ಬಗ್ಗೆ ಲಿಖಿತ ದೂರು ಸಲ್ಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ. ಅಲ್ಲದೇ 2019 ಸೆ.3 ರಂದು ಹುಬ್ಬಳ್ಳಿ ವಿಮಾ ಸಮೀಕ್ಷಕರ ನಿಯೋಗದೊಂದಿಗೆ ಹೈದರಾಬಾದ್​ಗೆ ಹೋಗಿ ಐಆರ್​ಡಿಎಐ ಚೇರ್ಮನ್ ಅವರಿಗೆ ಭೇಟಿ ಆಗಿ ಈ ಕುರಿತು ಮನವಿ ಸಲ್ಲಿಸಲಾಗಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ 2019 ರ ಕರಡನ್ನು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ABOUT THE AUTHOR

...view details