ಧಾರವಾಡ: ಪೊಲೀಸರ ಮೇಲೆ ಕೈ ಮಾಡಿದ ಇರಾನಿ ಗ್ಯಾಂಗ್ನವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೆಲವೇ ದಿನಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದು ಧಾರವಾಡದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಧಾರವಾಡದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ನೀವು ಆ್ಯಕ್ಷನ್ ನೋಡ್ತೀರಾ. ಈ ಹಿಂದೆ ಕೂಡ ಅವರು ಹಲ್ಲೆ ಮಾಡಿದ್ದರು. ಕಾನೂನು ಕೈಗೆ ತೆಗೆದುಕೊಳ್ಳುವವರ ಸದೆ ಬಡೆಯುವ ಕೆಲಸ ಮಾಡುತ್ತೇವೆ ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮರಾಠ ಸಮಾಜಕ್ಕೆ ಮೀಸಲಾತಿ ನೀಡದಿದ್ದಲ್ಲಿ ಚುನಾವಣೆ ಬಹಿಷ್ಕಾರ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅಂಜಲಿ ನಿಂಬಾಳ್ಕರ್ ಹೇಳಿಕೆಗೆ ನಾನು ಪ್ರತಿಕ್ರಿಯೆ ಮಾಡಲು ಸಾಧ್ಯವಿಲ್ಲ. ಸಮಗ್ರ ಸಮಾಜಗಳು ಹೇಳುವುದನ್ನು ನಮ್ಮ ಸರ್ಕಾರ ಪರಿಗಣಿಸುತ್ತದೆ ಎಂದರು.
ಮಂಗಳೂರು ಕೋರ್ಟ್ ಬಳಿ ಗೋಡೆಯ ಮೇಲೆ ಮತ್ತೊಂದು ಎಚ್ಚರಿಕೆ ಬರಹ!
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಮಾಧ್ಯಮಗಳ ಉಹಾಪೋಹ ಮಾತ್ರ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುತ್ತಾರೆ. ಸದೃಢವಾದ ಸರ್ಕಾರ ಕೊಡುತ್ತಾರೆ. ಇದರಲ್ಲಿ ಎರಡು ಮಾತೇ ಇಲ್ಲ ಎಂದರು.