ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಕಲಿ ಸಜ್ಜನರ್​ ಮನೆಯಲ್ಲಿ ಹಬ್ಬದ ವಾತಾವರಣ... ಸ್ನೇಹಿತರು, ಬಂಧುಗಳಿಂದ ಶುಭಾಶಯ - Celebration at Sajjnar Parent's house

​ತಂದೆ ಚನ್ನಪ್ಪ ಸಜ್ಜನರ್, ತಾಯಿ  ಗಿರಿಜಮ್ಮ ಸಜ್ಜನರ್. ಇವರಿಗೆ  ಮೂರು ಮಕ್ಕಳು. ಇವರಲ್ಲಿ ಮೂರನೇ ಮಗನೇ  ವಿಶ್ವನಾಥ ಸಜ್ಜನರ್. ಇವರ ಇನ್ನೊಬ್ಬ ಸಹೋದರ ಪ್ರಕಾಶ್​ ಸಜ್ಜನರ ಹುಬ್ಬಳ್ಳಿಯಲ್ಲಿ ವೈದ್ಯರಾಗಿದ್ದು, ಪಗಡಿ ಓಣಿಯಲ್ಲಿ ಆಸ್ಪತ್ರೆ ಹೊಂದಿದ್ದಾರೆ.

ಗಂಡುಮೆಟ್ಟಿದ ನಾಡಿನವರು ಸಜ್ಜನರ್,  IPS officer Vishwanath Birth place is hubli
ಗಂಡುಮೆಟ್ಟಿದ ನಾಡಿನವರು ಸಜ್ಜನರ್

By

Published : Dec 6, 2019, 1:35 PM IST

ಹುಬ್ಬಳ್ಳಿ: ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್ ಮಾಡಿರುವ ವಿಶ್ವನಾಥ ಸಜ್ಜನರ್ ಸಾಹಸದಿಂದ ಗಂಡು ಮೆಟ್ಟಿದ ನಾಡಿಗೆ ಇನ್ನಷ್ಟು ಕೀರ್ತಿ ಹೆಚ್ಚಿದೆ.

ಸಜ್ಜನರ್ ಅವರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಅವರ ಸಂಬಂಧಿಗಳು, ಆಪ್ತರು ಸಜ್ಜನರ್​ ಮನೆಗೆ ಆಗಮಿಸಿ ಶುಭಕೋರುತ್ತಿದ್ದಾರೆ. ಮನೆಯಿಂದಲೇ ವಿಶ್ವನಾಥ್​ ಸಜ್ಜನರ್ ಸಾಹಸಕ್ಕೆ ಹೆಚ್ಚಿನ ಪ್ರಶಂಸೆ ಹಾಗೂ ಕರ್ತವ್ಯ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯ. ಇತಿಹಾಸದಲ್ಲಿಯೇ ಇಂತಹ ಮಹತ್ವದ ಕರ್ತವ್ಯ ನಿರ್ವಹಿಸಿರುವ ಸಜ್ಜನರ್ ನಮ್ಮ ಹುಬ್ಬಳ್ಳಿಯವರು ಎಂಬುವುದು ನಮ್ಮೆಲ್ಲರ ಹೆಮ್ಮೆ.

ಗಂಡುಮೆಟ್ಟಿದ ನಾಡಿನವರು ಸಜ್ಜನರ್

​ತಂದೆ ಚನ್ನಪ್ಪ ಸಜ್ಜನರ್, ತಾಯಿ ಗಿರಿಜಮ್ಮ ಸಜ್ಜನರ್. ಇವರಿಗೆ ಮೂರು ಮಕ್ಕಳು. ಇವರಲ್ಲಿ ಮೂರನೇ ಮಗನೇ ವಿಶ್ವನಾಥ ಸಜ್ಜನರ್. ಇವರ ಇನ್ನೊಬ್ಬ ಸಹೋದರ ಪ್ರಕಾಶ್​ ಸಜ್ಜನರ ಹುಬ್ಬಳ್ಳಿಯಲ್ಲಿ ವೈದ್ಯರಾಗಿದ್ದು, ಪಗಡಿ ಓಣಿಯಲ್ಲಿ ಆಸ್ಪತ್ರೆ ಹೊಂದಿದ್ದಾರೆ.

ಬಾಲ್ಯದಲ್ಲಿಯೇ ತಾಯಿಯನ್ನ ಕಳೆದುಕೊಂಡ ವಿಶ್ವನಾಥ್​ ಸಜ್ಜನರ್ ತಮ್ಮ ಚಿಕ್ಕಮ್ಮರಾದ ಮಲ್ಲಮ್ಮ ಸಜ್ಜನರ್ ಅವರ ಮಡಿಲಲ್ಲಿ ಬೆಳೆದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ- ಲೈನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿಜಯನಗರ ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿ, ಪಿಯುಸಿ-ಪದವಿ ವಿದ್ಯಾಭ್ಯಾಸವನ್ನು ಜಗದ್ಗುರು ಗಂಗಾಧರ ಕಾಮರ್ಸ್ ಕಾಲೇಜು ವಿದ್ಯಾನಗರ ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ‌ ಮುಗಿಸಿದ ಅವರು, ಹೈದರಾಬಾದ್​ನಲ್ಲಿ ಐಎಎಸ್ ಕೋಚಿಂಗ್ ಪಡೆದಿದ್ದಾರೆ. 1996 ರಲ್ಲಿ ಯುಪಿಎಸ್‌ಸಿ ತೇರ್ಗಡೆ ಹೊಂದಿ ಡಿವೈಎಸ್‌ಪಿ ಆಗಿ ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪುಲಿವಂದಲಾದಿಂದ ವೃತ್ತಿ ಜೀವನ ಆರಂಭ ಮಾಡಿದರು‌.

ABOUT THE AUTHOR

...view details