ಹುಬ್ಬಳ್ಳಿ:ನೈರುತ್ಯ ರೈಲ್ವೆ ವಲಯದಲ್ಲಿ ಆವಿಷ್ಕಾರದ ಮೂಲಕ ವಿನೂತನ ಪ್ರಯತ್ನವೊಂದಕ್ಕೆ ಕೈಹಾಕಿದ್ದಾರೆ. ಸೈಕಲ್ ಪೆಡಲ್ ಮೂಲಕ ಟ್ರಾಲಿಯನ್ನು ನಿರ್ಮಿಸಲಾಗಿದೆ.
ನಾವೆಲ್ಲ ಯಂತ್ರಚಾಲಿತ ಟ್ರಾಲಿಯನ್ನು ನೋಡಿದ್ದೇವೆ. ಆದರೆ, ಈಗ ಸೈಕಲ್ ಪೆಡಲ್ ಮೂಲಕ ರೈಲ್ವೆ ಹಳಿ ಮೇಲೆ ಟ್ರಾಲಿ ನಡೆಸುವ ಪ್ರಯತ್ನ ನಡೆದಿದೆ. ಇದರಿಂದ ರೈಲ್ವೆ ಹಳಿ ವೀಕ್ಷಣೆ ಹಾಗೂ ಕಾಮಗಾರಿ ಪರಿಶೀಲನೆ, ಸಿಗ್ನಲ್ ಸೇರಿದಂತೆ ರೈಲ್ವೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಹೆಚ್ಚು ಅನುಕೂಲವಾಗಲಿದೆ.