ಕರ್ನಾಟಕ

karnataka

ETV Bharat / state

ಊರಿಗೆ ಮರಳಲು ಹಣವಿಲ್ಲದೆ ಅಂತಾರಾಜ್ಯ ಕಾರ್ಮಿಕರ ಪರದಾಟ - Hubli interstate labors latest news

ಸುಮಾರು 70 ಕ್ಕೂ ಹೆಚ್ಚು ಅಂತಾರಾಜ್ಯ ಕೂಲಿ ಕಾರ್ಮಿಕರು ಇವತ್ತು ತಮ್ಮ ಸ್ವಂತ ಊರುಗಳಿಗೆ ಹೋಗಲಾರದೆ ಹುಬ್ಬಳ್ಳಿ ಹೊಸ ಬಸ್​ಸ್ಟ್ಯಾಂಡ್​ನಲ್ಲಿ ಠಿಕಾಣಿ ಹೂಡಿದ್ದಾರೆ.

ಅಂತಾರಾಜ್ಯ ಕಾರ್ಮಿಕರ ಪರದಾಟ

By

Published : May 9, 2020, 5:19 PM IST

ಹುಬ್ಬಳ್ಳಿ: ಕಳೆದ 45 ದಿನಗಳಿಂದ ಇಡೀ ದೇಶವೇ ಲಾಕ್​ಡೌನ್​ ಆಗಿದೆ. ಇದರಿಂದ ದಿನಗೂಲಿ ಕೆಲಸ ಮಾಡುವ ಕಾರ್ಮಿಕರ ಜೀವನ ಸಂಕಷ್ಟಕ್ಕೀಡಾಗಿದೆ. ಊಟಕ್ಕಾಗಿ ಪರದಾಡುವ ಪರಿಸ್ಥಿತಿಯಲ್ಲಿರುವ ಅಂತಾರಾಜ್ಯ ಕಾರ್ಮಿಕರು ಊರಿಗೆ ಹೋಗಲು ಹಣವಿಲ್ಲದೇ ಗೋಳಾಡುವಂತಾಗಿದೆ.

ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಊರುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸುಮಾರು 70 ಕ್ಕೂ ಹೆಚ್ಚು ಅಂತಾರಾಜ್ಯ ಕೂಲಿ ಕಾರ್ಮಿಕರು ಇವತ್ತು ತಮ್ಮ ಸ್ವಂತ ಊರುಗಳಿಗೆ ಹೋಗಲಾರದೆ ನಗರದ ಹೊಸ ಬಸ್​ಸ್ಟ್ಯಾಂಡ್​ನಲ್ಲಿ ಠಿಕಾಣಿ ಹೂಡಿದ್ದಾರೆ. ಕೆಲವು ಕಾರ್ಮಿಕರು ಮಂಗಳೂರಿನಿಂದ ಇಲ್ಲಿಗೆ ನಡೆದುಕೊಂಡು ಬಂದಿದ್ದಾರೆ.

ನಗರದ ಹೊಸ ಬಸ್ ನಿಲ್ದಾಣದಲ್ಲಿ ಬೇರೆ ರಾಜ್ಯಗಳಿಗೆ ಹೊರಡುವವರಿಗಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಒಂದು ಕಿ.ಮೀ ಹೋಗಲು ಕೆಎಸ್​ಆರ್​ಟಿಸಿ ಸಂಸ್ಥೆಗೆ 41 ರೂಪಾಯಿ ಹಣ ನೀಡಬೇಕು. ಹಣವಿಲ್ಲದೆ ಊರಿಗೆ ಹೋಗುವುದೇ ಒಂದು ಕಷ್ಟದ ಕೆಲಸವಾಗಿದೆ. ಹೊರ ರಾಜ್ಯಕ್ಕೆ ಹೋಗುವ ಕಾರ್ಮಿಕರಿಗೆ ಆಯಾ ರಾಜ್ಯ ಸರ್ಕಾರಗಳು ಅನುಮತಿ ನೀಡಬೇಕು‌. ಆದರೆ ಮದ್ಯ ಪ್ರದೇಶ ಸರ್ಕಾರ ಇದುವರೆಗೆ ಈ ವಲಸೆ ಕಾರ್ಮಿಕರ ಸಂಪರ್ಕಕ್ಕೆ ಬಂದಿಲ್ಲ. ಹೀಗಾಗಿ ದುಬಾರಿ ಹಣವನ್ನು ನೀಡಿ, ತಮ್ಮ ಊರುಗಳಿಗೆ ಹೋಗಲು ಇವರಿಗೆ ಸಾಧ್ಯವಾಗುತ್ತಿಲ್ಲ.

ಜಿಲ್ಲಾಡಳಿತ ಸೂಕ್ತವಾದ ವ್ಯವಸ್ಥೆ ಕಲ್ಪಿಸಿಕೊಟ್ಟು, ಇವರಿಗೆ ತಮ್ಮ ಊರುಗಳಿಗೆ ಮರಳಲು ವ್ಯವಸ್ಥೆ ಮಾಡಬೇಕು ಎಂಬುದು ಕಾರ್ಮಿಕರ ಆಗ್ರಹವಾಗಿದೆ.

ABOUT THE AUTHOR

...view details