ಹುಬ್ಬಳ್ಳಿ:ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕ್ಷಮತಾ ಸಂಸ್ಥೆಯು ಕುಸುಗಲ್ ರಸ್ತೆಯಲ್ಲಿರುವ ಆಕ್ಸ್‌ಫರ್ಡ್ ಕಾಲೇಜು ಹತ್ತಿರದ ಮೈದಾನದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದೆ. ಉತ್ಸವದ ಎರಡನೇ ದಿನವಾದ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಸಿದ್ದಾರೂಢ ಶ್ರೀಗಳ ಗಾಳಿಪಟ ಹಾರಿಸುವ ಮೂಲಕ ಗೌರವ ನಮನ ಸಲ್ಲಿಸಿದರು.
ಹುಬ್ಬಳ್ಳಿಯಲ್ಲಿ ಗಾಳಿಪಟ ಹಾರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ - ಗಾಳಿಪಟ ಉತ್ಸವದಲ್ಲಿ ಸಿದ್ದಾರೂಢ ಶ್ರೀಗಳಿಗೆ ಗೌರವ ನಮನ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕ್ಷಮತಾ ಸಂಸ್ಥೆಯು, ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದೆ. ಈ ವೇಳೆ ಸಚಿವರು ಸಿದ್ದಾರೂಢ ಶ್ರೀಗಳ ಗಾಳಿಪಟ ಹಾರಿಸುವ ಮೂಲಕ ಗೌರವ ನಮಸ ಸಲ್ಲಿಸಿದರು.

ಗಾಳಿಪಟ ಉತ್ಸವಕ್ಕೆ ಲಂಡನ್, ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳಿಂದ ಅಂತಾರಾಷ್ಟ್ರೀಯ ಖ್ಯಾತಿಯ 32 ಪಟುಗಳು ಆಗಮಿಸಿದ್ದು, ಎಲ್ಲರೂ ಕೂಡ ಹುಬ್ಬಳ್ಳಿಯ ಆರಾಧ್ಯ ದೈವ ಸಿದ್ಧಾರೂಢರಿಗೆ ಗೌರವ ಸಮರ್ಪಿಸಿರುವುದು ವಿಶೇಷವಾಗಿತ್ತು.
ಇನ್ನು, ಉತ್ಸವವು ಕೇವಲ ಗಾಳಿಪಟ ಹಾರಾಟಕ್ಕೆ ಮಾತ್ರ ಸೀಮಿತವಾಗದೇ, ಮಕ್ಕಳಿಗೆ ಮನರಂಜನೆ ಹಾಗೂ ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೆ ವೇದಿಕೆಯಾಯಿತು. ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಗಡಿಗರ ಸಂಗೀತ ಸಂಜೆ, ಎಲ್ಲರ ಗಮನ ಸೆಳೆಯಿತು.ಮಯೂರ ನೃತ್ಯ ಕಲಾ ಸಂಸ್ಥೆಯ ಮಕ್ಕಳು, ಭರತ ನಾಟ್ಯವನ್ನು ಮೂಲಕ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೊಸ ಮೆರುಗು ತಂದರು.