ಹುಬ್ಬಳ್ಳಿ:ರಾಜ್ಯ ಸರ್ಕಾರದ ಆದೇಶದ ಮೇರೆಗೆ ನಗರದಲ್ಲಿಂದು ಬಟ್ಟೆ ಹಾಗೂ ಇನ್ನಿತರ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಕನ್ನಡದಲ್ಲೇ ನಾಮಫಲಕ ಹಾಕುವಂತೆ ಹು-ಧಾ ಪಾಲಿಕೆ ಆರೋಗ್ಯ ಅಧಿಕಾರಿ ಶ್ರೀಧರ್ ದಂಡಪ್ಪನ್ನವರ ನೋಟಿಸ್ ನೀಡಿದ್ದಾರೆ.
ಕನ್ನಡದಲ್ಲಿ ನಾಮ ಫಲಕ ಹಾಕದಿದ್ದರೆ ಟ್ರೇಡ್ ಲೈಸೆನ್ಸ್ ಕ್ಯಾನ್ಸಲ್ : ಹು - ಧಾ ಪಾಲಿಕೆ ಎಚ್ಚರಿಕೆ - ಹುಬ್ಬಳ್ಳಿಯಲ್ಲಿ ಕನ್ನಡದಲ್ಲಿ ನಾಮ ಫಲಕ ಹಾಕದಿದ್ದರೆ ಟ್ರೇಡ್ ಲೈಸೆನ್ಸ್ ಕ್ಯಾನ್ಸಲ್
ನಗರದಲ್ಲಿನ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಆಂಗ್ಲ ಭಾಷೆಯಲ್ಲಿನ ನಾಮಫಲಕವನ್ನು ತೆಗೆಯುವಂತೆ ಹಾಗೂ ಕಡ್ಡಾಯವಾಗಿ ಕನ್ನಡದಲ್ಲಿ ನಾಮ ಫಲಕ ಬಳಸುವಂತೆ ಹು - ಧಾ ಪಾಲಿಕೆ ಆರೋಗ್ಯ ಅಧಿಕಾರಿ ಶ್ರೀಧರ್ ದಂಡಪ್ಪನ್ನವರ ನೋಟಿಸ್ ನೀಡಿದರು.
![ಕನ್ನಡದಲ್ಲಿ ನಾಮ ಫಲಕ ಹಾಕದಿದ್ದರೆ ಟ್ರೇಡ್ ಲೈಸೆನ್ಸ್ ಕ್ಯಾನ್ಸಲ್ : ಹು - ಧಾ ಪಾಲಿಕೆ ಎಚ್ಚರಿಕೆ Instructions to put a name plate in Kannada in Hubli](https://etvbharatimages.akamaized.net/etvbharat/prod-images/768-512-9435775-146-9435775-1604543137855.jpg)
ಹುಬ್ಬಳ್ಳಿಯಲ್ಲಿ ಕನ್ನಡದಲ್ಲಿ ನಾಮ ಫಲಕ ಹಾಕುವಂತೆ ಹು-ಧಾ ಪಾಲಿಕೆ ಎಚ್ಚರಿಕೆ
ಕನ್ನಡದಲ್ಲಿ ನಾಮ ಫಲಕ ಹಾಕುವಂತೆ ಹು-ಧಾ ಪಾಲಿಕೆ ಎಚ್ಚರಿಕೆ
ನಗರದಲ್ಲಿನ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಆಂಗ್ಲ ಭಾಷೆಯಲ್ಲಿನ ನಾಮಫಲಕವನ್ನು ತೆಗೆಯುವಂತೇ ಹಾಗೂ ಕಡ್ಡಾಯವಾಗಿ ಕನ್ನಡದಲ್ಲಿ ನಾಮ ಫಲಕ ಬಳಸುವಂತೆ ನೋಟಿಸ್ ನೀಡಿದರು. ಒಂದು ವಾರದೊಳಗೆ ಕನ್ನಡದಲ್ಲಿ ನಾಮ ಫಲಕ ಹಾಕದಿದ್ದರೆ ಕೆ.ಎಂ.ಸಿ ಕಾಯ್ದೆ 1976 ಕಲಂ 353, 354 ಪ್ರಕಾರ ಟ್ರೇಡ್ ಲೈಸೆನ್ಸ್ ರದ್ದು ಗೊಳಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.