ಹುಬ್ಬಳ್ಳಿ : ಆಟೋ ಚಾಲನೆಗೆ ಅನುಮತಿ ಸಿಕ್ಕ ಕೂಡಲೇ ನಿಯಮಗಳನ್ನು ಮೀರಿ ಚಾಲನೆ ಮಾಡಬಾರದೆಂದು ಆಟೋ ಚಾಲಕರನ್ನು ಠಾಣೆಗೆ ಕರೆಯಿಸಿ ನಗರದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ್ ಹೊಸಪೇಟೆ ಎಚ್ಚರಿಸಿದ್ದಾರೆ.
ಆಟೋ ಚಾಲಕರಿಗೆ ಎಚ್ಚರಿಕೆ ನೀಡಿದ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ್ - Inspector Mahantesh alerted the auto drivers
ನಿಯಮಗಳನ್ನು ಮೀರಿ ಚಾಲನೆ ಮಾಡಬಾರದು ಎಂದು ಆಟೋ ಚಾಲಕರನ್ನು ಠಾಣೆಗೆ ಕರೆಯಿಸಿ ಹುಬ್ಬಳ್ಳಿ ನಗರದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ್ ಹೊಸಪೇಟೆ ಎಚ್ಚರಿಸಿದ್ದಾರೆ.
ಆಟೋ ಚಾಲಕರಿಗೆ ಎಚ್ಚರಿಕೆ ನೀಡಿದ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ್
ಹುಬ್ಬಳ್ಳಿ ನಗರದಲ್ಲಿ ಇಂದು ಆಟೋರಿಕ್ಷಾಗಳಿಗೆ ಸಂಚರಿಸಲು ಪರವಾನಗಿ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕೂರಿಸದೇ, ಕೇವಲ ಇಬ್ಬರನ್ನು ಮಾತ್ರ ಹಾಕಲು ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ, ಸುಕಾ ಸುಮ್ಮನೆ ಆಟೋ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಹಾಕಿ ಆತಂಕ ಮೂಡಿಸಬಾರದು ಎಂದು ತಿಳಿ ಹೇಳಿದರು.
ಕೊರೊನಾ ವೈರಸ್ನಿಂದ ಯಾವ ರೀತಿಯಾಗಿ ತಾವು ಜಾಗೃತಿ ವಹಿಸಬೇಕು, ಜೊತೆಗೆ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಟೋ ಚಾಲಕರಿಗೆ ಎಚ್ಚರಿಕೆ ಜೊತೆಗೆ ಮನವಿ ಮಾಡಿದರು.