ಕರ್ನಾಟಕ

karnataka

ETV Bharat / state

ಶೆಟ್ಟರ್ ವಿರುದ್ಧ ನಾನೇ ಬಂಡಾಯ ಅಭ್ಯರ್ಥಿ ಎಂದ ಅಲ್ತಾಫ್​ ಕಿತ್ತೂರು.. ಮಾಜಿ ಸಿಎಂ ಹೇಳಿದ್ದೇನು? - hubballi dharawad central constituency

ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್​ನಿಂದ ಅನ್ಯಾಯವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಲ್ತಾಫ್​ ಕಿತ್ತೂರು ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

injustice-to-muslim-community-by-congress-leaders-altaf-kitturu
ಕಾಂಗ್ರೆಸ್ ವರಿಷ್ಠರಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ, ಶೆಟ್ಟರ್ ವಿರುದ್ದ ನಾನೇ ಬಂಡಾಯ ಅಭ್ಯರ್ಥಿ: ಅಲ್ತಾಪ ಕಿತ್ತೂರು

By

Published : Apr 23, 2023, 4:10 PM IST

ಶೆಟ್ಟರ್ ವಿರುದ್ಧ ನಾನೇ ಬಂಡಾಯ ಅಭ್ಯರ್ಥಿ ಎಂದ ಅಲ್ತಾಫ್​ ಕಿತ್ತೂರು

ಹುಬ್ಬಳ್ಳಿ: ಜಿಲ್ಲೆಯಲ್ಲಿ ಅಲ್ಪ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಆಗ್ರಹ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ವರಿಷ್ಠರು ಟಿಕೆಟ್ ನೀಡದೆ ನಮ್ಮ‌ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಅಲ್ತಾಫ್​ ಕಿತ್ತೂರು ಆರೋಪಿಸಿದರು.

ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಮೋಸ ಮಾಡಿರುವುದನ್ನು ಖಂಡಿಸಿ ಈ ಬಾರಿಯ ಚುನವಾಣೆಯಲ್ಲಿ ಹುಬ್ಬಳ್ಳಿ -ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾಮಪತ್ರ ಸಲ್ಲಿಸಲಾಗಿದೆ ಎಂದರು. ಹಿಂದೆ‌ ಹು-ಧಾ ಪಶ್ಚಿಮ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಅಲ್ಲಿ ದೀಪಕ್​ ಚಿಂಚೋರೆ, ಇಸ್ಮಾಯಿಲ್ ತಮಟಗಾರ ಅವರು ನನಗೆ ಟಿಕೆಟ್ ನೀಡಬಾರದು ಎಂದು ವರಿಷ್ಠರಿಗೆ ಬೆದರಿಕೆ ಹಾಕಿದ್ದರು. ಆದರಿಂದ‌ ನನಗೆ ಟಿಕೆಟ್ ದೊರೆತಿಲ್ಲ ಎಂದು ದೂರಿದರು.

ಇದನ್ನೂ ಓದಿ:ಕೂಡಲಸಂಗಮಕ್ಕೆ ಕೈ ನಾಯಕ ರಾಹುಲ್​ ಗಾಂಧಿ ಭೇಟಿ: ಸಿದ್ದರಾಮಯ್ಯ ಸಾಥ್

ಶಿಗ್ಗಾಂವಿಯಲ್ಲಿ ಮೊದಲು ಯೂಸೂಫ್​​ ಸವಣೂರು ಅವರಿಗೆ ಟಿಕಟ್​ ನೀಡಿದ್ದರು. ಬಂಕಾಪುರ ಶಿಗ್ಗಾಂವಿ ಜನ ವಿರೋಧಿಸಿದ ನಂತರ ಕೇವಲ 24 ಗಂಟೆಗಳಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿದರು. ಇದರಿಂದ ಹುಬ್ಬಳ್ಳಿ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಕಾಂಗ್ರೆಸ್​​ ಪಕ್ಷದಿಂದ ಅನ್ಯಾಯವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದವರಿಗೆ ಮುಸ್ಲಿಂ ಸಮುದಾಯದವರು ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಈ ಬಾರಿ ಅದು ಬದಲಾಗಲಿದ್ದು, ಮುಸ್ಲಿಮರು ಕಾಂಗ್ರೆಸ್​​ಗೆ ಬುದ್ಧಿ ಕಲಿಸಲಿದ್ದಾರೆ ಎಂದು ಹರಿಹಾಯ್ದರು. ಎಲ್ಲ ಸಮಾಜದ ಮತದಾರರು ಸಹ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದ್ದು, ನಾನು ಸೆಂಟ್ರಲ್ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ತೆಕ್ಕೆಗೆ ಬಿಜೆಪಿ ಬಂಡಾಯ ಅಭ್ಯರ್ಥಿ: ಜಾರಕಿಹೊಳಿ ಸಮ್ಮುಖದಲ್ಲಿ ಕೈ ಸೇರ್ಪಡೆ

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಈಗಾಗಲೇ ಪಕ್ಷದ ವರಿಷ್ಠರು ಅಲ್ತಾಫ್​ ಕಿತ್ತೂರು ಅವರ ಜೊತೆ ಮಾತನಾಡಿದ್ದಾರೆ. ನಾನು ಅವರ ಬಳಿ ಮಾತನಾಡಿ ಮನವೊಲಿಸುತ್ತೇನೆ. ಎಲ್ಲಾ ಸರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಕೇಂದ್ರ ನಾಯಕರು ಜಗದೀಶ್​ ಶೆಟ್ಟರ್​​ ಅವರನ್ನು ಟಾರ್ಗೆಟ್​ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ನನ್ನ ಜೊತೆ ಇರುವವರೆಗೂ ಮತ್ತು ಕಾಂಗ್ರೆಸ್​​ ಪಕ್ಷ ಶಕ್ತಿಯಾಗಿ ನಿಂತಿದೆ. ಅಲ್ಲಿಯವರೆಗೂ ನಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನನ್ನನ್ನು ಟಾರ್ಗೆಟ್​​ ಮಾಡುವರ ಬಗ್ಗೆ ನಾನು ಚಿಂತಿಸುವುದಿಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಆ ವಿಶ್ವಾಸದಿಂದ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಶೆಟ್ಟರ್​ ಹೇಳಿದ್ರು.

ಇದನ್ನೂ ಓದಿ:ರಾಹುಲ್ ಗಾಂಧಿ ಜೊತೆ ಜಗದೀಶ್ ಶೆಟ್ಟರ್ ಚರ್ಚೆ: ನಾಗಪುರ ತಂಡ ನನ್ನ ಚಲನವಲನ ತಿಳಿಯುವ ಮುನ್ನ ಚುನಾವಣೆ ಮುಗಿದಿರುತ್ತೆ ಎಂದ ಮಾಜಿ ಸಿಎಂ

ABOUT THE AUTHOR

...view details