ಹುಬ್ಬಳ್ಳಿ: ಐದು ಸಾವಿರ ರೂಪಾಯಿ ಬಡ್ಡಿ ಹಣದ ಜೊತೆಗೆ ಆಟೋದ ದಿನದ ರಿಪೋರ್ಟ್ ಸರಿಯಾಗಿ ಕೊಡುತ್ತಿಲ್ಲವೆಂಬ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಸಾವಿಗೀಡಾಗಿರುವ ಘಟನೆ ಹಳೇ ಹುಬ್ಬಳ್ಳಿಯಲ್ಲಿ ನಡೆದಿದೆ.
ನೇಕಾರನಗರದ ಚೌಹಾಣ್ ಪ್ಲಾಟ್‌ನ ಲೋಕೇಶ್ ಎಂಬ ಆಟೋ ಚಾಲಕನಿಗೆ ಮಾರುತಿ ಎಂಬಾತ ಬಡ್ಡಿಯಾಗಿ 5 ಸಾವಿರ ರೂಪಾಯಿ ನೀಡಿದ್ದ. ಅಷ್ಟೇ ಅಲ್ಲ, ದಿನವೊಂದಕ್ಕೆ ಆಟೋದ 200 ರೂಪಾಯಿ ರಿಪೋರ್ಟ್ ಅನ್ನು ಲೋಕೇಶ್ ಕೊಡಬೇಕಾಗಿತ್ತು.
ಆಟೋ ರಿಪೋರ್ಟ್ ಕೊಡದಕ್ಕೆ ಮಾರಣಾಂತಿಕ ಹಲ್ಲೆ ಈ ಸಂಬಂಧ ನಿನ್ನೆ ಮಾರುತಿ ನಾಲ್ಕೈದು ಜನರನ್ನು ಕರೆದುಕೊಂಡು ಬಂದು ಲೋಕೇಶನ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಲೋಕೇಶನನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಮಾರುತಿ ಎಂಬಾನೇ ನಮ್ಮ ಸಹೋದರನ ಸಾವಿಗೆ ಕಾರಣ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.