ಕರ್ನಾಟಕ

karnataka

ETV Bharat / state

ಸೋಂಕಿತ ವ್ಯಕ್ತಿಯ ಪ್ರಯಾಣದ ವಿವರ.. ಪರೀಕ್ಷೆ ಮಾಡಿಸಿಕೊಳ್ಳುವಂತೆ ಧಾರವಾಡ ಡಿಸಿ ಸೂಚನೆ - ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚನೆ

ಬಾಗಲಕೋಟೆ ಜಿಲ್ಲೆಯ ಓರ್ವ ಸೋಂಕಿತ ವ್ಯಕ್ತಿ ಪಿ-162 ಈತ ಮಾ.16ರಂದು ಸಂಜೆ 4 ಗಂಟೆಗೆ ಕಲಬುರಗಿಯಿಂದ ವಿಜಯಪುರಕ್ಕೆ ಹೊರಟ ಬಸ್ ಸಂಖ್ಯೆ: ಕೆಎ-32 ಎಫ್-2284ನಲ್ಲಿ ಸಂಚರಿಸಿದ್ದಾನೆ.

Infected person in Bagalkot district Travel Details
ಬಾಗಲಕೋಟೆಯ ಸೋಂಕಿತ ವ್ಯಕ್ತಿ ಪ್ರಯಾಣ ವಿವರ: ಪರೀಕ್ಷೆ ಮಾಡಿಸಿಕೊಳ್ಳುವಂತೆ ಧಾರವಾಡ ಡಿಸಿ ಸೂಚನೆ

By

Published : Apr 13, 2020, 8:40 PM IST

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರೊಂದಿಗಿನ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕದಲ್ಲಿ ಇರುವ ಹಾಗೂ ಅವರ ಪ್ರವಾಸದ ತನಿಖೆ ನಡೆಸಲಾಗುತ್ತಿದೆ.

ಬಾಗಲಕೋಟೆಯ ಸೋಂಕಿತ ವ್ಯಕ್ತಿ ಪ್ರಯಾಣದ ವಿವರ: ಪರೀಕ್ಷೆ ಮಾಡಿಸಿಕೊಳ್ಳುವಂತೆ ಧಾರವಾಡ ಡಿಸಿ ಸೂಚನೆ

ಬಾಗಲಕೋಟೆ ಜಿಲ್ಲೆಯ ಓರ್ವ ಸೋಂಕಿತ ವ್ಯಕ್ತಿ ಪಿ-162 ಈತ ಮಾ. 16ರಂದು ಸಂಜೆ 4 ಗಂಟೆಗೆ ಕಲಬುರಗಿಯಿಂದ ವಿಜಯಪುರಕ್ಕೆ ಹೊರಟ ಬಸ್ ಸಂಖ್ಯೆ: ಕೆಎ-32 ಎಫ್-2284ನಲ್ಲಿ ಸಂಚರಿಸಿದ್ದಾನೆ. ಹಾಗೂ ಅದೇ ದಿನ ರಾತ್ರಿ 8:30ಕ್ಕೆ ಬೀಳಗಿ ಘಟಕದ ವಿಜಯಪುರದಿಂದ ಹುಬ್ಬಳ್ಳಿಯವರೆಗೆ ವಾಹನ ಸಂಖ್ಯೆ:ಕೆ.ಎ-29 ಎಫ್-1531ನಲ್ಲಿ ಪ್ರಯಾಣಿಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಅಂದು ಈ ಬಸ್‍ಗಳಲ್ಲಿ ಸಂಚರಿಸಿದ ಸಾರ್ವಜನಿಕರು ಕೂಡಲೇ ಕೊರೊನಾ ಸಹಾಯವಾಣಿ 104 ಅಥವಾ 1077ಕ್ಕೆ ಕರೆ ಮಾಡಿ ತಮ್ಮ ವಿವರಗಳನ್ನು ತಿಳಿಸಬೇಕು. ಹಾಗೂ ಸಮೀಪದ ತಾಲೂಕು ಆರೋಗ್ಯ ಕೇಂದ್ರಗಳಲ್ಲಾಗಲಿ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಾಗಲಿ ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ABOUT THE AUTHOR

...view details