ಕರ್ನಾಟಕ

karnataka

ETV Bharat / state

ಇಂದಿರಾ ಕ್ಯಾಂಟೀನ್ ಮಾಸ್ಟರ್ ಕಿಚನ್ ಬಂದ್: ಸಾರ್ವಜನಿಕರಲ್ಲಿ ಮೂಡಿದ ಗೊಂದಲ - Indira Canteen news

ಅದು ಅದೆಷ್ಟೋ ಬಡ ಜನರ ಹಸಿವು ನೀಗಿಸುವ ಬಹುದೊಡ್ಡ ಯೋಜನೆಯಾಗಿತ್ತು. ಆ ಯೋಜನೆಯಡಿ ಕಡಿಮೆ ಹಣದಲ್ಲಿ ಹೊಟ್ಟೆ ತುಂಬ ಊಟ ಮಾಡಿಕೊಂಡು ಹೋಗುತ್ತಿದ್ದ ಜನರಿಗೆ ಈಗಿನ ಸರ್ಕಾರ ಶಾಕ್ ನೀಡಿದೆ.

ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್

By

Published : Jan 7, 2021, 10:36 PM IST

Updated : Jan 7, 2021, 10:42 PM IST

ಹುಬ್ಬಳ್ಳಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಡವರ ಹಸಿವು ನೀಗಿಸುವ ಉದ್ದೇಶದಿಂದ ದಿ. ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್​​ ಆರಂಭಿಸಿದ್ದರು. ಈ ಯೋಜನೆಗೆ ಕೋಟಿ ಹಣ ವ್ಯಯ ಮಾಡಿದ ಅಂದಿನ ಸರ್ಕಾರದ ಅವಧಿ ಮುಗಿಯುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಒಂದೊಂದಾಗಿ ಮುಚ್ಚಿಕೊಳ್ಳುವ ಹಂತಕ್ಕೆ ತಲುಪಿರುವುದು ದುರಾದೃಷ್ಟಕರ.

ಇಂದಿರಾ ಕ್ಯಾಂಟೀನ್ ಮಾಸ್ಟರ್ ಕಿಚನ್ ಬಂದ್

ಅವಳಿ ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಕೇಶ್ವಾಪುರ ಬೆಂಗೇರಿಯಲ್ಲಿ ಮೂರು ವರ್ಷಗಳ ಹಿಂದೆ ಆರಂಭಿಸಿದ್ದ ಮಾಸ್ಟರ್ ಕಿಚನ್ 10 ತಿಂಗಳಿನಿಂದ ಬಂದ್ ಆಗಿದೆ. ಕೆಲವೇ ದಿನಗಳಲ್ಲಿ ತಲೆಎತ್ತಿ ನಿಂತಿದ್ದ ಈ ಮಾಸ್ಟರ್ ಕಿಚನ್ ಕಟ್ಟಡ ಸದ್ಯ ನಿರುಪಯುಕ್ತವಾಗಿದ್ದು, ಸರ್ಕಾರದ ಹಣ ಹೇಗೆ ವ್ಯಯವಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

ಓದಿ:ದಾವಣಗೆರೆಯಲ್ಲಿ ಶಾರ್ಟ್ ಸರ್ಕ್ಯೂಟ್​​​ನಿಂದ ಹೊತ್ತಿ ಉರಿದ ಹೋಟೆಲ್!

ಬೆಂಗೇರಿಯ ಸಂತೆ ಮಾರುಕಟ್ಟೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಮೈದಾನದಲ್ಲಿ ಅಲ್ಲಿನ ಕೆಲವರ ಭಾರಿ ವಿರೋಧದ ಮಧ್ಯೆ ಕಿಚನ್ ಕಟ್ಟಡ ನಿರ್ಮಿಸಲಾಗಿತ್ತು. ಸರ್ಕಾರದ ಆದೇಶದಂತೆ ಟಿಫನ್ ಹಾಗೂ ಮಧ್ಯಾಹ್ನ , ಸಂಜೆ ಊಟಕ್ಕೆ ಬೇಕಾದ ಆಹಾರವನ್ನು ಈ ಕಿಚನ್‌ನಲ್ಲಿಯೇ ತಯಾರಿಸಿ, ಅವಳಿ ನಗರದಲ್ಲಿರುವ 9 ಇಂದಿರಾ ಕ್ಯಾಂಟೀನ್​ಗಳಿಗೆ ಪೂರೈಸಲಾಗುತ್ತಿತ್ತು. ಆದ್ರೆ ಇದನ್ನು ನಿಲ್ಲಿಸಿ ಖಾಸಗಿಯಾಗಿ ಆಹಾರ ತಯಾರಿಸಿ ಪೂರೈಸುತ್ತಿರುವುದು ಪಾಲಿಕೆಗೆ ತಿಳಿಯದಿರುವುದು ಅಚ್ಚರಿ ಮೂಡಿಸಿದೆ. ಮುಖ್ಯ ಅಡುಗೆ ಕೇಂದ್ರ ಬಂದ್ ಆಗಿದ್ದರಿಂದ ಊಟ ,ಉಪಹಾರ ಎಲ್ಲಿಂದ ಪೂರೈಸಲಾಗುತ್ತಿದೆ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.

Last Updated : Jan 7, 2021, 10:42 PM IST

ABOUT THE AUTHOR

...view details