ಧಾರವಾಡ :ಭಾರತೀಯ ಜೈನ್ ಸಂಘಟನೆಯ ಹುಬ್ಬಳ್ಳಿ ಘಟಕ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್‌ಗೆ 5 ಮಿನಿ ಬಸ್‌ಗಳನ್ನು ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಹಸ್ತಾಂತರಿಸಿದರು.
ಕೋವಿಡ್ ತಪಾಸಣೆಗಾಗಿ 5 ವಾಹನ ನೀಡಿದ ಭಾರತೀಯ ಜೈನ್ ಸಂಘಟನೆ - Indian Jain Organization
ಆರೋಗ್ಯ ಇಲಾಖೆಯೊಂದಿಗೆ ಕೋವಿಡ್ ತಪಾಸಣೆಗೆ ಮನೆಗೆ ಮನೆಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ವಾಹನಗಳು ತೆರಳಲಿವೆ. ಪರೀಕ್ಷೆಯಲ್ಲಿ ಸೋಂಕು ಕಂಡು ಬಂದ ವ್ಯಕ್ತಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಈ ವಾಹನಗಳು ನೆರವಾಗಲಿವೆ..
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಿಷನ್ ಜೀರೋ ಕೋವಿಡ್ ಕೇಸ್ ಎಂಬ ಘೋಷ ವಾಕ್ಯದೊಂದಿಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್‌ಗೆ ಕೋವಿಡ್ ತಪಾಸಣೆ ನಡೆಸಲು ವಾಹನಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಕೋವಿಡ್ ನಿಯಂತ್ರಣಕ್ಕೆ ಸಂಘ, ಸಂಸ್ಥೆಗಳು ಸಹಕಾರ ನೀಡುತ್ತಿರುವುದಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯೊಂದಿಗೆ ಕೋವಿಡ್ ತಪಾಸಣೆಗೆ ಮನೆಗೆ ಮನೆಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ವಾಹನಗಳು ತೆರಳಲಿವೆ. ಪರೀಕ್ಷೆಯಲ್ಲಿ ಸೋಂಕು ಕಂಡು ಬಂದ ವ್ಯಕ್ತಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಈ ವಾಹನಗಳು ನೆರವಾಗಲಿವೆ. ಈ ಕಾರ್ಯ ಇತರೆ ಸಂಘಟನೆಗಳಿಗೆ ಮಾದರಿ ಎಂದು ಜಿಲ್ಲಾಧಿಕಾರಿ ಹೇಳಿದರು.