ಹುಬ್ಬಳ್ಳಿ :ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ವುತ್ತಲೇ ಇದೆ. ಆದ್ರೂ ಕೂಡ ಅವಳಿ ನಗರದ ಜನತೆ ಎಚ್ಚೆತ್ತುಕೊಳ್ಳುತ್ತಿಲ್ಲ. ಲಾಕ್‌ಡೌನ್ ನಡುವೆಯೇ ಜನ ರಸ್ತೆಗಿಳಿಯುವ ಮೂಲಕ ತಮ್ಮ ನಿಷ್ಕಾಳಜಿ ತೋರಿಸುತ್ತಿದ್ದಾರೆ.
ಬುದ್ಧಿ ಇದ್ದವರು ಯಾರಾದ್ರೂ ಹಿಂಗ್ ಮಾಡ್ತಾರೇನ್ರೀ,, ಬುದ್ಧಿಗೇಡಿಗಳು ಹಳೇ ಬುದ್ಧಿಗೇಡಿಗಳು.. - ಧಾರವಾಡದಲ್ಲಿ ಲಾಕ್‌ಡೌನ್ ಉಲ್ಲಂಘನೆ
ಕೊರೊನಾ ಶಂಕಿತರ ಸಂಖ್ಯೆ 71 ರಿಂದ 121ಕ್ಕೆ ಏರಿಕೆಯಾಗಿದೆ. 121 ಜನರ ಪರೀಕ್ಷಾ ವರದಿಗಾಗಿ ಎದುರು ನೋಡಲಾಗ್ತಿದೆ.
ಧಾರವಾಡ
ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಸಂಖ್ಯೆ 71 ರಿಂದ 121ಕ್ಕೆ ಏರಿಕೆಯಾಗಿದೆ. 121 ಜನರ ಪರೀಕ್ಷಾ ವರದಿಗಾಗಿ ಎದುರು ನೋಡಲಾಗ್ತಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರೂ ಜನರು ಕ್ಯಾರೇ ಎನ್ನದೆ ರಸ್ತೆಗೆ ಇಳಿಯುತ್ತಿದ್ದಾರೆ.
ಬೆಳಿಗ್ಗೆಯಿಂದಲೇ ನಗರದ ಪ್ರಮುಖ ರಸ್ತೆಗಳು ಫುಲ್ ರಶ್ ಆಗುತ್ತಿವೆ. ಆಟೋ, ಬೈಕ್ ಹಾಗೂ ಖಾಸಗಿ ವಾಹನಗಳು ರಸ್ತೆಗಿಳಿಯುವ ಮೂಲಕ ಲಾಕ್‌ಡೌನ್ ಉಲ್ಲಂಘನೆ ಮಾಡಲಾಗುತ್ತಿದೆ.