ಹುಬ್ಬಳಿ:ಹುಳಿ, ಸಿಹಿ ಮಿಶ್ರಿತ ಅನಾನಸ್ ಹಣ್ಣಿನ ಜ್ಯೂಸ್ ದಾಹ ನೀಗಿಸುತ್ತದೆ. ಜೊತೆಗೆ ನೆಗಡಿ ಕೆಮ್ಮಿನಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ಕಡಿಮೆ ಮಾಡುವ ಔಷಧೀಯ ಗುಣವನ್ನೂ ಹೊಂದಿದೆ. ಹೀಗಾಗಿಯೇ ಈಗ ಈ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಅನಾನಸ್ಗೆ ಎಲ್ಲಿಲ್ಲದ ಬೇಡಿಕೆ.. ನೆಗಡಿ ಕೆಮ್ಮಿಗೆ ರಾಮ ಬಾಣವಂತೆ ಈ ಹಣ್ಣು..!!
ಅನಾನಸ್ ಹಣ್ಣಿನ ಜ್ಯೂಸ್ ದಾಹ ನೀಗಿಸುತ್ತದೆ. ಜೊತೆಗೆ ನೆಗಡಿ ಕೆಮ್ಮಿನಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ಕಡಿಮೆ ಮಾಡುವ ಔಷಧೀಯ ಗುಣ ಹೊಂದಿದೆ. ಹೀಗಾಗಿಯೇ ಈಗ ಈ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಹೌದು.. ಇಡೀ ದೇಶವೆ ಕೊರೊನಾ ಸೋಂಕಿನ ಹಾವಳಿಗೆ ನಲುಗಿ ಹೋಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆಯೂ ಏರುತ್ತಲೇ ಇದೆ. ರೋಗಿಗಳ ರೋಗ ನಿರೋಧಕ ಶಕ್ತಿ ವೃದ್ಧಿಸಲು ಪ್ರಮುಖವಾಗಿ ವಿಟಮಿನ್ 'ಸಿ' ಇರುವ ಮಾತ್ರೆಗಳನ್ನು ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ರೋಗ ನಿರೋಧಕ ಗುಣವನ್ನು ಹೊಂದಿರುವ ಪೈನಾಪಲ್ ಜ್ಯೂಸ್ ಅನ್ನು ಸಾಮಾನ್ಯವಾಗಿ ಎಲ್ಲೆಡೆ ರೋಗಿಗಳಿಗೆ ನೀಡಲಾಗುತ್ತಿದೆ. ಹೀಗಾಗಿಯೇ ಅನಾನಸ್ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.
ಕೊರೊನಾ ನಿಯಂತ್ರಿಸಲು ಸಹಕರಿಸುವ ಈ ಹಣ್ಣಿನ ಖರೀದಿಗೆ ಹುಬ್ಬಳ್ಳಿ ಮಂದಿ ಮುಗಿ ಬೀಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಲ್ಲಾ ಹಣ್ಣಿಗಿಂತ ಹೆಚ್ಚು ಅನಾನಸ್ ಮಾರಾಟವಾಗುತ್ತಿರುವುದು. ಅನಾನಸ್ ಹಣ್ಣಿನಲ್ಲಿ ವಿವಿಧ ವಿಟಮಿನ್‌ಗಳು, ಖನಿಜಾಂಶಗಳು ಯಥೇಚ್ಛವಾಗಿರುವ ಕಾರಣ ಈ ಹಣ್ಣು ಹೊಟ್ಟೆಯಲ್ಲಿನ ಸೋಂಕು, ಅಜೀರ್ಣತೆ ಇತ್ಯಾದಿಗಳನ್ನು ನಿವಾರಣೆ ಮಾಡುತ್ತದೆ. ಇದರಲ್ಲಿ ವಿಟಮಿನ್ 'ಸಿ' ಮತ್ತು ಬ್ರೊಮೆಲೇನ್ ಅಂಶ ಇರುವುದರಿಂದ ಇವು ನೆಗಡಿ ಉಂಟು ಮಾಡುವ ವೈರಸ್ ವಿರುದ್ಧ ಹೋರಾಡುತ್ತವೆ. ಆದ್ದರಿಂದ ಪೈನಾಪಲ್ ಹಣ್ಣಿಗೆ ಭಾರಿ ಬೇಡಿಕೆ ಬಂದಿದ್ದು, ಉತ್ತಮ ಮಾರುಕಟ್ಟೆ ಕಂಡುಕೊಂಡಿದೆ ಎನ್ನುತ್ತಾರೆ ವ್ಯಾಪಾರಸ್ಥರು.