ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಲಾಕ್​ಡೌನ್ ತೆರವು: ಬಸ್ ಸಂಚಾರ ಹೆಚ್ಚಳ - hubballi ksrtc news

ಎಲ್ಲ ರೀತಿಯ ಲಾಕ್​ಡೌನ್​ ತೆರವುಗೊಳಿಸಿದ ಕಾರಣ ಪ್ರಯಾಣಿಕ ಸಂಚಾರ ಹೆಚ್ಚಳವಾಗುತ್ತಿದೆ. ಹಬ್ಬಗಳು ಬಂದಿರುವುದರಿಂದ ಜನ ದಟ್ಟಣೆಯಾಗುತ್ತಿದೆ ಅದಕ್ಕಾಗಿ ಹುಬ್ಬಳ್ಳಿಯ ವಿಭಾಗದ ಬಸ್​ ನಿಲ್ದಾಣದಿಂದ ಹೆಚ್ಚಿನ ಬಸ್​ಗಳನ್ನು ರಸ್ತೆಗಿಳಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್​.ರಾಮನಗೌಡರ ಹೇಳಿದರು.

KSRTC bus facility
ಹುಬ್ಬಳ್ಳಿಯಲ್ಲಿ ಬಸ್​ ಸಂಚಾರ ಹೆಚ್ಚಳ

By

Published : Aug 2, 2020, 11:49 PM IST

ಹುಬ್ಬಳ್ಳಿ: ಕೊರೊನಾ ಭೀತಿಯ ನಡುವೆಯೂ ಶ್ರಾವಣ ಶನಿವಾರ ಮತ್ತು ಬಕ್ರೀದ್ ಹಬ್ಬದ ಪ್ರಯುಕ್ತ ಸಾರ್ವಜನಿಕ ಸಂಚಾರ ಹೆಚ್ಚಾಗಿದೆ. ಆದ್ದರಿಂದ ಬಸ್ ಸಂಚಾರವನ್ನು ಹೆಚ್ಚಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್​.ರಾಮನಗೌಡರ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಬಸ್​ ಸಂಚಾರ ಹೆಚ್ಚಳ

ಸರ್ಕಾರವೂ ಆರು ದಿನದ ಭಾಗಶಃ ಲಾಕ್​ಡೌನ್, ಭಾನುವಾರದ ಸಂಪೂರ್ಣ ಲಾಕ್​ಡೌನ್ ತೆರವುಗೊಳಿಸಿದೆ. ಇದರಿಂದಲೂ ಸಾರಿಗೆ ಸಂಚಾರ ಹೆಚ್ಚಾಗಿದೆ. ಹುಬ್ಬಳ್ಳಿ ವಿಭಾಗದ ಬಸ್ ನಿಲ್ದಾಣಗಳಿಂದ ಸಂಚರಿಸಿದ ಬಸ್​ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಕಳೆದ ಶುಕ್ರವಾರ 135 ಬಸ್​ಗಳು 214 ಟ್ರಿಪ್​ಗಳಲ್ಲಿ ಸಂಚರಿಸಿವೆ. ಶನಿವಾರ 109 ಬಸ್​ಗಳು 195 ಟ್ರಿಪ್​ಗಳಲ್ಲಿ ಸಂಚರಿಸಿವೆ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಸೋಮವಾರದಿಂದ ಹೆಚ್ಚಿನ ಪ್ರಯಾಣಿಕರ ನಿರೀಕ್ಷೆ ಇದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಬಸ್​ಗಳನ್ನು ರಸ್ತೆಗಿಳಿಸಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ABOUT THE AUTHOR

...view details