ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿಯ ಮತ್ತೊಬ್ಬ ಆಪ್ತನಿಗೆ ಐಟಿ ಇಲಾಖೆ ನೋಟಿಸ್ ನೀಡಿದೆ. ಇಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ ಐಟಿ ಕಚೇರಿಗೆ ಆಗಮಿಸುವಂತೆ ವಿನಯ‌್ ಪರ ಚುನಾವಣಾ ಪ್ರಚಾರದಲ್ಲಿ ಓಡಾಡುತ್ತಿದ್ದ ಅರವಿಂದ ಏಗನಗೌಡರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ವಿಚಾರಣೆಗೆ ಹಾಜರಾಗುವಂತೆ ವಿನಯ್ ಕುಲಕರ್ಣಿ ಆಪ್ತನಿಗೆ ಐಟಿ ಇಲಾಖೆ ನೋಟಿಸ್ - ಐಟಿ ಇಲಾಖೆ ನೋಟಿಸ್
ವಿನಯ್ ಕುಲಕರ್ಣಿ ಆಪ್ತರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಏಗನಗೌಡರ್ಗೆ ದಾಖಲೆ ಸಮೇತ ಕಚೇರಿ ಬರುವಂತೆ ನೋಟಿಸ್ ನೀಡಲಾಗಿದೆ.
ಏಗನಗೌಡರ್
ದಾಖಲೆ ಸಮೇತ ಕಚೇರಿ ಬರುವಂತೆ ಏಗನಗೌಡರ್ಗೆ ನೋಟಿಸ್ ನೀಡಿರುವ ಐಟಿ ಅಧಿಕಾರಿಗಳು, ಗುರುವಾರವಷ್ಟೇ ವಿನಯ‌್ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ ಕೇಕರೆ ಹಾಗೂ ಈಶ್ವರ ಶಿವಳ್ಳಿ ಮನೆ ಮೇಲೆ ದಾಳಿ ಮಾಡಿದ್ದರು. ಅರವಿಂದ ಧಾರವಾಡ ಗ್ರಾಮೀಣ ಕ್ಷೇತದ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಈ ಹಿಂದೆ ಬಿಜೆಪಿಯಲ್ಲಿದ್ದ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು.
ಇದನ್ನೂ ಓದಿ :ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತನ ನಿವಾಸದ ಮೇಲೆ ಐಟಿ ದಾಳಿ