ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಐ ಸೇವರ್ಸ್​ ಆಪ್ಟಿಕಲ್​​ನಲ್ಲಿ 'ಕೊರೊನಾ ಓವೆನ್'​ಗೆ ಸಚಿವ ಶೆಟ್ಟರ್​ ಚಾಲನೆ - Corona Oven Inaugurated at Hubli Eye Savers

ಕೊರೊನಾ ವೈರಸ್​ ಸೇರಿದಂತೆ ಯಾವುದೇ ಸೋಂಕನ್ನು ತಡೆಯಬಲ್ಲ ಕೊರೊನಾ ಓವೆನ್​​ಅನ್ನು ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿ ಹುಬ್ಬಳ್ಳಿಯ ಐ ಸೇವರ್ಸ್​ ಆಪ್ಟಿಕಲ್​​ನಲ್ಲಿ ಸ್ಥಾಪಿಸಲಾಗಿದ್ದು, ಸಚಿವ ಜಗದೀಶ್​ ಶೆಟ್ಟರ್​ ಚಾಲನೆ ನೀಡಿದರು.

Jagadeesh Shetter Inaugurated Corona Oven
ಕೊರೊನಾ ಒವೆನ್'​ಗೆ ಜಗದೀಶ್​ ಶೆಟ್ಟರ್​ ಚಾಲನೆ

By

Published : Jun 5, 2020, 9:54 PM IST

ಹುಬ್ಬಳ್ಳಿ:ಕೊರೊನಾ ಹಿನ್ನೆಲೆ ಐ ಸೇವರ್ಸ್ ಆಪ್ಟಿಕಲ್​ನಲ್ಲಿ ಕನ್ನಡಕ ಮತ್ತು ಚೌಕಟ್ಟುಗಳನ್ನು ಸೋಂಕು ರಹಿತಗೊಳಿಸಲು ಸ್ಥಾಪಿಸಲಾಗಿರುವ ಕೊರೊನಾ ಓವೆನ್​ಅನ್ನು ಸಚಿವ ಜಗದೀಶ್ ಶೆಟ್ಟರ್ ಉದ್ಘಾಟನೆ ಮಾಡಿದರು.

ಕೊರೊನಾ ವೈರಸ್​ಗಳ ಜೀವಕೋಶದ ರಚನೆ ಮತ್ತು ಗುಣಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಈ ಓವೆನ್ ವಿನ್ಯಾಸಗೊಳಿಸಲಾಗಿದೆ. ಯುವಿಸಿ ಚೇಂಬರ್ ಒಳಗೊಂಡಿರುವ ಇದು ಎಲ್ಲಾ ರೀತಿಯ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

ಕೊರೊನಾ ಓವೆನ್​ಗೆ ಸಚಿವ ಜಗದೀಶ್​ ಶೆಟ್ಟರ್​ ಚಾಲನೆ

ಕನ್ನಡಕವನ್ನು ಸೋಂಕು ರಹಿತಗೊಳಿಸಲು 360 ಡಿಗ್ರಿ ನೇರಳಾತೀತ ಬೆಳಕನ್ನು ಹೊಂದಿರುವ ಯುವಿ-ಸಿ 294 ಎನ್ಎಂ ತರಂಗಾಂತರವನ್ನು ಈ ಓವೆನ್​ನಲ್ಲಿ ಬಳಸಲಾಗುತ್ತದೆ. ಇದನ್ನು ಸರ್ಕಾರ ಇ-ಮಾರುಕಟ್ಟೆ ಜಿಇಎಂ ಎಂದು ಪಟ್ಟಿ ಮಾಡಿದೆ. ಐ ಸೇವರ್ಸ್​ ಈ ತಂತ್ರಜ್ಞಾನ ಪ್ರಾರಂಭಿಸಿದ ಉತ್ತರ ಕರ್ನಾಟಕದ ಮೊದಲ ಆಪ್ಟಿಕಲ್ ಆಗಿದೆ.

ABOUT THE AUTHOR

...view details